

ಮದ್ದೂರು: ಪಟ್ಟಣದಲ್ಲಿ ಧ್ವನಿ ಮಹಿಳಾ ಸಂಸ್ಥೆಯ ವತಿಯಿಂದ ಪುರಸಭೆ ಮುಂಭಾಗದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಶನಿವಾರ ಮೊದಲನೇ ವರ್ಷಾಚರಣೆ ಕಾರ್ಯಕ್ರಮ ನಡೆಯಿತು.
ಪ್ರತಿಮೆಗೆ ನಮನ ಸಲ್ಲಿಸಿದ ನಂತರ ಮಹಿಳಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ರಜನಿ ರಾಜ್ ಮಾತನಾಡಿ, ನೊಂದ ಮಹಿಳೆಯರಿಗೆ ಸ್ಪಂದಿಸುವ ಉದ್ದೇಶದಿಂದ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದರು. ಸಂಸ್ಥೆ ಉಪಾಧಕ್ಷೆ ನಂದಿನಿ ಮಾಲತೇಶ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಅನುಭವಿತ್ತಿದ್ದಾರೆ. ಅವರ ಕಣ್ಣೀರು ಒರೆಸುವ ಕೆಲಸವನ್ನು ಸಾಧ್ಯವಾದಷ್ಟು ಮಾಡಲಾಗುತ್ತಿದೆ ಎಂದರು. ಅಧ್ಯಕ್ಷೆ ಉಜ್ವಲಾ, ಗೌರವಾಧ್ಯಕ್ಷೆ ನಂದಿನಿ ಮಾಲತೇಶ್, ಕಾನೂನು ಸಲಹೆಗಾರರಾದ ಪವಿತ್ರಾ, ಯಶೋದಮ್ಮ, ವೀಣಾ, ರುಮಾನ ಕೌಸರ್ ಇತರರು ಇದ್ದರು.