ಜಯದೇವಿತಾಯಿ ಶಾಲಾ ಸಂಸತ್ ರಚನೆ

IMG-20230809-WA0026-1.jpg
Published on

ಹುಬ್ಬಳ್ಳಿ: ಆಕಾಶದೆತ್ತರಕ್ಕೆ ಹಾರಲು ಭೂಮಿಯ ಮೇಲಿನ ಹೆಜ್ಜೆ ದೃಢವಾಗಿರಬೇಕು. ಸಾಧಕರಾಗಲು ಸತತ ಪರಿಶ್ರಮ ಬೇಕು ಎಂದು ಉಚ್ಚ ನ್ಯಾಯಾಲಯದ ವಕೀಲರಾದ ಚಿನ್ನಶ್ರೀ ಬೆಳ್ಳಕ್ಕಿ ಹೇಳಿದರು.

ಧಾರವಾಡ ಕಿಲ್ಲೆಯಲ್ಲಿರುವ ಜಯದೇವಿತಾಯಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತು ಹಾಗೂ ದಳಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವಿದ್ಯಾಥಿರ್ಗಳು ಅಧ್ಯಯನಶೀಲರಾಗಬೇಕು. ಪ್ರತಿಯೊಂದು ಪಠ್ಯವನ್ನು ಶಿಸ್ತು ಬದ್ಧವಾಗಿ ಓದುವ ಮೂಲಕ ಸರಳೀಕರಣಗೊಳಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ಆಡಳಿತ ಮಂಡಳಿಯ ಚೇರ್ಮನ್ ಎಸ್.ಎಸ್. ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಯಕತ್ವ ಗುಣ ಹಾಗೂ ಶಿಸ್ತಿನ ಬಗ್ಗೆ ಮಾರ್ಗದರ್ಶನ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ಚಿಕ್ಕಮಠ ಕವನ ವಾಚನ ಮಾಡಿದರು.

ಶಾಲಾ ಸಂಸತ್ತಿನ ಪ್ರಧಾನಮಂತ್ರಿ ರಕ್ಷಿತಾ ಬಡಿಗೇರ ಹಾಗೂ ಇತರ ಮಂತ್ರಿಗಳಾದ ಕಾವೇರಿ ಪಟ್ಟಿಹಾಳ, ಮನಿಷಾ ಕಿತ್ತೂರ, ಭಾಗ್ಯಶ್ರೀ ದೊಡಮನಿ, ಸೌಜನ್ಯ ಲಮಾಣಿ ಅವರು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುವುದಾಗಿ ಹೇಳಿದರು.

ಡಿ.ಎಂ. ದಲಾಲ್, ವಿ.ವಿ. ಕಿಲ್ಲೇದ ಅವರಿಗೆ ಸನ್ಮಾನಿಸಲಾಯಿತು. ಆಡಳಿತ ಮಂಡಳಿಯ ಖಜಾಂಚಿ ಜೆ.ಜಿ. ಸುಬ್ಬಾಪೂರಮಠ, ಸದಸ್ಯರಾದ ಡಿ.ಜಿ. ದೊಡ್ಡವಾಡ, ಉಪಸ್ಥಿತರಿದ್ದರು.

ಮುಖ್ಯ ಗುರುಗಳಾದ ಎಸ್.ಎಸ್. ಸುರಪುರಮಠ ಸ್ವಾಗತಿಸಿದರು. ಪಿ.ಎಫ್. ಬಾದಾಮಿ ಸಂಸತ್ ಪರಿಚಯಿಸಿದರು, ಎಸ್.ಎಸ್. ಚೌದರಿ ನಿರೂಪಿಸಿದರು, ಮುದರೆಡ್ಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net