ಹುಬ್ಬಳ್ಳಿ ಶಿರಡಿನಗರ ದ್ವಾರಕಾಮಾಯಿ ಲೋಕಾರ್ಪಣೆ

IMG-20230910-WA0012.jpg
Published on

ಹುಬ್ಬಳ್ಳಿ: ಕಾಯಾ, ವಾಚಾ, ಮನಸಾ ಸೇವೆ ಮಾಡುವವರಿಗೆ ಶ್ರೀ ಸಾಯಿಬಾಬಾ ಅವರ ಕೃಪೆ ಸದಾ ಇರುತ್ತದೆ, ಭಕ್ತಿಯಿಂದ ಪೂಜಿಸಿದರೆ ದೇವರು ಒಲಿದು ಬರುತ್ತಾನೆ, ಬೇಡಿದ ವರವನ್ನು ಕರುಣಿಸುತ್ತಾನೆ ಎಂದು ಇಲ್ಲಿಯ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.

ಇಲ್ಲಿಯ ಶಿರಡಿನಗರದ ಸಾಯಿ ಮಂದಿರದಲ್ಲಿ ಭಾನುವಾರ ಶ್ರೀ ಶಿರಡಿ ಸಾಯಿಬಾಬಾ ಮಹಾಮಂಡಳಿಯಿಂದ ಏರ್ಪಡಿಸಿದ್ದ ನೂತನವಾಗಿ ನಿಮಿರ್ಸಿದ ದ್ವಾರಕಾಮಾಯಿ ಕಟ್ಟಡ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಶಿರಡಿನಗರದಲ್ಲಿ ಸಾಯಿಬಾಬಾರ ದ್ವಾರಕಾಮಾಯಿ ತದ್ರೂಪಿ ಮಂದಿರವು ನಿರ್ಮಾಣವಾಗಿದೆ. ಶಿರಡಿಯಂತೆ ಇಲ್ಲಿಯೂ ಸಾಯಿಬಾಬಾರ ದರ್ಶನವನ್ನು ಮಾಡಬಹುದು. ಮಂದಿರ ಮತ್ತು ದೇವಸ್ಥಾನಗಳು ಅವಳಿನಗರದಲ್ಲಿ ಬಹಳಷ್ಟಿವೆ. ಆದರೆ, ಬಾಬಾರ ದ್ವಾರಕಾಮಾಯಿ ಶಿರಡಿನಗರದಲ್ಲಿ ಮಾತ್ರ ಇದೆ ಎಂದರು.

ಶಿರಡಿ ಮಾದರಿಯಲ್ಲಿ ನಿಮಿರ್ಸಿದ ಬೆಳ್ಳಿ ಕವಚದ ಮುಖ್ಯ ಮಂಟಪ ಹಾಗೂ ಚರಣ ಕಮಲಗಳು ಮತ್ತು ಶ್ರೀ ಸಾಯಿನಾಥರು ದ್ವಾರಕಾಮಾಯಿಯಲ್ಲಿ ವಿರಾಜಮಾನರಾಗಿ ಕುಳಿತಿರುವ ತೈಲಚಿತ್ರದ ಅನಾವರಣವೂ ಇದೇ ಸಂದರ್ಭದಲ್ಲಿ ನಡೆಯಿತು.

ಅತಿಥಿಯಾಗಿದ್ದ ಶಾಸಕ ಮಹೇಶ ಟೆಂಗಿನಕಾಯಿ, ಯಾರೇ ಆಗಲಿ ಭಕ್ತಿ, ಶ್ರದ್ಧೆಯಿಂದ ಕೆಲಸ ಮಾಡಿದರೆ ಅದರಿಂದ ಅವರಿಗೆ ಸಿಗುವ ಲವು ಉತ್ತಮವಾಗಿರುತ್ತದೆ. ಹುಬ್ಬಳ್ಳಿಯ ಶಿರಡಿನಗರದಲ್ಲಿ ನಿರ್ಮಾಣವಾಗಿರುವ ದ್ವಾರಕಾಮಾಯಿಯು ನಗರದ ಮಹತ್ವ ಹೆಚ್ಚಿಸಿದೆ. ಹುಬ್ಬಳ್ಳಿ ಪ್ರವಾಸಿ ತಾಣವಾಗಲು ಇದು ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಶಿರಡಿಯ ಗೋಪಿನಾಥ ಪಾಟೀಲ, ಶ್ರೀಕಾಂತ ನಾಗರೇ, ಪುಣೆಯ ಸುನಿಲ ಶೇಜಗಾಂವಕರ, ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ, ಸ್ವರ್ಣ ಸಮೂಹ ಸಂಸ್ಥೆಗಳ ಎಂಡಿ ಡಾ. ವಿ.ಎಸ್.ವಿ. ಪ್ರಸಾದ, ಸಿದ್ದು ಮೊಗಲಿಶೆಟ್ಟರ್, ಶ್ರೀಕಾಂತ ಮಲ್ಲೂರ, ಬಸವರಾಜ ಅಂಬಲಿ, ರಾಜನ್ ಅಣ್ವೇಕರ, ಚಂದ್ರಶೇಖರ ಗೋಕಾಕ, ಸಂಜಯ ಕಾಬ್ರಾ, ಡಾ. ನಾಗಲಿಂಗ ಮುರಗಿ, ದತ್ತಾ ಲೋಖಂಡೆ ಇತರರು ಪಾಲ್ಗೊಂಡಿದ್ದರು.

ರೂಪಾ ಖಡಗಾಂವಿ, ಸರೋಜಿನಿ ಬಡಿಗೇರ ಪ್ರಾರ್ಥನೆ ಹಾಡಿದರು. ಮಹಾಮಂಡಳಿ ಅಧ್ಯಕ್ಷ ವಿಶ್ವನಾಥ ತ್ರಿಮಲ್ಲೆ ಸ್ವಾಗತಿಸಿದರು. ಜಗದೀಶ ಯಲಿಗಾರ ಪ್ರಾಸ್ತಾವಿಕ ಮಾತನಾಡಿದರು.

ಪಾದುಕೆ, ಕನಿ ದರ್ಶನ: ಶ್ರೀ ಶಿರಡಿ ಸಾಯಿಬಾಬಾ ಅವರು ಧರಿಸಿದ ಪಾದುಕೆಗಳು ಹಾಗೂ ಕನಿಯನ್ನು ಎರಡು ದಿನಗಳ ಕಾಲ ಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಭಾನುವಾರ ಸಾವಿರಾರು ಭಕ್ತರು ಇವುಗಳ ದರ್ಶನ ಪಡೆದರು. ತಮ್ಮ ಇಷ್ಟಾರ್ಥ ಸಲ್ಲಿಸಿ ಬಾಬಾ ಅವರಿಗೆ ಬೇಡಿಕೊಂಡರು. ಶನಿವಾರ ಮಧ್ಯಾಹ್ನ ನಗರಕ್ಕೆ ಆಗಮಿಸಿದ ಪಾದುಕೆ ಹಾಗೂ ಕನಿಯನ್ನು ಗಣೇಶ ಮಂದಿರದಿಂದ ದೇವಸ್ಥಾನದ ವರೆಗೆ ಶೋಭಾಯಾತ್ರೆ ಮೂಲಕ ತರಲಾಯಿತು. ರ್ಪೂಣಕುಂಭ ಮೇಳ, ಸಂತರ ಭಜನೆಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net