ಎಲ್ಲರೊಂದಿಗೆ ಬೆರೆಯುವ ಅವಕಾಶ DWARAKA

ಉಪ್ಪಿನಂಗಡಿ ಕೆಮ್ಮಾರದಲ್ಲಿ ದ್ವಾರಕಾ ಸಮೂಹ ಸಂಸ್ಥೆಯ ಉಜ್ಜೀವನ ಬಡಾವಣೆ ಲೋಕಾರ್ಪಣೆಗೊಳಿಸಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್‌ಕುಮಾರ್ ಬೊಟ್ಯಾಡಿ, ಬೆಂಗಳೂರು ಜೀವಿನ್ ಸೀನಿಯರ್ ಕೇರ್‌ನ ಡಾ.ಮುರಳೀಧರ ಭಟ್, ಮಾಜಿ ಶಾಸಕ ಸಂಜೀವ ಮಠಂದೂರು, ದ್ವಾರಕಾ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ಟ ಮತ್ತಿತರರಿದ್ದರು.
ಉಪ್ಪಿನಂಗಡಿ ಕೆಮ್ಮಾರದಲ್ಲಿ ದ್ವಾರಕಾ ಸಮೂಹ ಸಂಸ್ಥೆಯ ಉಜ್ಜೀವನ ಬಡಾವಣೆ ಲೋಕಾರ್ಪಣೆಗೊಳಿಸಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್‌ಕುಮಾರ್ ಬೊಟ್ಯಾಡಿ, ಬೆಂಗಳೂರು ಜೀವಿನ್ ಸೀನಿಯರ್ ಕೇರ್‌ನ ಡಾ.ಮುರಳೀಧರ ಭಟ್, ಮಾಜಿ ಶಾಸಕ ಸಂಜೀವ ಮಠಂದೂರು, ದ್ವಾರಕಾ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ಟ ಮತ್ತಿತರರಿದ್ದರು.
Published on
*ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಆಶಯ *ಉಜ್ಜೀವನ ಬಡಾವಣೆ ಲೋಕಾರ್ಪಣೆ
ಪುತ್ತೂರು: ಅವಿಭಕ್ತ ಕುಟುಂಬ ಇದ್ದಾಗ ಸಂತೋಷದ ವಾತಾವರಣ ಇರುತ್ತಿತ್ತು. ಕುಟುಂಬ ವಿಭಕ್ತವಾದಲ್ಲಿಂದ ಮನೆಯಲ್ಲಿರುವ ಹಿರಿಯರಿಗೆ ಭದ್ರತೆಯಿಲ್ಲ. ಹಿರಿಯರಿಗೆ ಎಲ್ಲರೊಂದಿಗೆ ಬೆರೆಯುವ ಅವಕಾಶ ಸಿಗಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಉಪ್ಪಿನಂಗಡಿ ಕೆಮ್ಮಾರದಲ್ಲಿ ದ್ವಾರಕಾ ಸಮೂಹ ಸಂಸ್ಥೆಯ ಉಜ್ಜೀವನ ಬಡಾವಣೆಯನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಹಿರಿಯ ನಾಗರಿಕರ ಜೀವನ ಬೆಳಗುವ ಮೂಲಕ ಸಮಾಜದ ಕಷ್ಟಕ್ಕೆ ಉಜ್ಜೀವನದ ಮೂಲಕ ಸ್ಪಂದಿಸುವ ಕಾರ್ಯವಾಗಿದೆ ಎಂದರು.
ಬೆಂಗಳೂರು ಜೀವಿನ್ ಸೀನಿಯರ್ ಕೇರ್‌ನ ಡಾ.ಮುರಳೀಧರ ಭಟ್ ಮಾತನಾಡಿ, ಹಿರಿಯರು ಆಹಾರ ಹಾಗೂ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು. ಹಿರಿಯರಿಗೆ ಮಾನಸಿಕ ಹಾಗೂ ಶಾರೀರಿಕ ಭದ್ರತೆ ಅಗತ್ಯವಿದೆ. ಸಮಸ್ಯೆಗಳಿಗೆ ಪರಿಹಾರವಾಗಿ ಉಜ್ಜೀವನ ಬಡಾವಣೆಯಿದೆ ಎಂದರು.
ದ್ವಾರಕಾ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ಟ ಅಧ್ಯಕ್ಷತೆ ವಹಿಸಿದ್ದರು.ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ಟ ಅರ್ತ್ಯಡ್ಕ, ಮಾಜಿ ಶಾಸಕ ಸಂಜೀವ ಮಠಂದೂರು, ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ ಕುಮಾರ್, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ರಮೇಶ್ ಉಪ್ಪಂಗಳ, ಉದ್ಯಮಿ ಡಾ.ಹೇಮಂತ್ ರೈ ಮನವಳಿಕೆ, ಮಂಜುನಾಥ ನಾಯಕ್, ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಹಿರೆಬಂಡಾಡಿ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಸದಾನಂದ ಶೆಟ್ಟಿ, ನಿರ್ದೇಶಕಿ ಲಕ್ಷ್ಮೀ, ಸಹಾಯಕ ನಿರ್ದೇಶಕಿ ಅಶ್ವಿನಿ ಎನ್.ಉಪಸ್ಥಿತರಿದ್ದರು.
ಸುಮನಾ, ರಕ್ಷಾ ಗಣೇಶ್ ಪ್ರಾರ್ಥಿಸಿದರು. ಕಾರ್ಯನಿರ್ವಾಹಕ ನಿರ್ದೇಶಕ ಅಮೃತಕೃಷ್ಣ ಎನ್.ಸ್ವಾಗತಿಸಿದರು. ನವೀನ ಕೃಷ್ಣ ಎಸ್.ವಂದಿಸಿದರು. ದ್ವಾರಕಾ ಪ್ರತಿಷ್ಠಾನ ಕಾರ್ಯದರ್ಶಿ ಗಣರಾಜ ಕುಂಬ್ಳೆ ನಿರೂಪಿಸಿದರು. ಶ್ವೇತಾ ರಾಮಮೋಹನ, ಧನ್ಯಶ್ರೀ ಮಿಂಚಿನಡ್ಕ, ಕೀರ್ತನಾ ದ್ವಾರಕಾ ಸಹಕರಿಸಿದರು.
ಸೌಲರ್ಭ್ಯ ಉದ್ಘಾಟನೆ, ಸಂಗೀತ ಸುಧಾ
ದ್ವಾರಕಾ ಬಸ್ ನಿಲ್ದಾಣ, ದ್ವಾರಕಾ ನೆಸ್ಟ್, ದ್ವಾರಕಾ ರಿ-ಶ್ಮೆಂಟ್, ದ್ವಾರಕಾ ಮಾರ್ಟ್ ಉದ್ಘಾಟಿಸಲಾಯಿತು. ನಿರ್ಮಾಣ ಕಾಮಗಾರಿಯಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ಗಾಯಕ ಬೆಂಗಳೂರು ರಾಹುಲ್ ವೆಲ್ಲಾಲ್ ಬಳಗದಿಂದ ಭಕ್ತಿ ಸಂಗೀತ ಸುಧಾ ಕಾರ್ಯಕ್ರಮ ನಡೆಯಿತು.
"

ಹೊಸತನಗಳನ್ನು ಯೋಚಿಸಿ ಉದ್ಯಮಕ್ಕೆ ಮುಂದಾದಾಗ ಯಶಸ್ಸು ಲಭಿಸುತ್ತದೆ. ಸ್ಥಳೀಯ ಗೋತಳಿ ಅಭಿವೃದ್ಧಿಗೆ ಗೋಶಾಲೆ, ಡೇ ಕೇರ್, ಫಿಸಿಯೋಥೆರಪಿ, ಮಿನಿಹಾಲ್, ಗೆಸ್ಟ್‌ಹೌಸ್ ನಿರ್ಮಾಣ ಆಗಬೇಕಾಗಿದೆ. ಜೀವನದಲ್ಲಿ ಪ್ರತಿಯೊಬ್ಬರಿಗೆ ಪ್ರೀತಿ, ಗೌರವ, ಭದ್ರತೆ ಲಭಿಸಬೇಕು. ನೆಮ್ಮದಿಯ ಜೀವನ ಕಟ್ಟಿಕೊಂಡಾಗ ಕೆಲಸ ಸಾರ್ಥಕವಾಗುತ್ತದೆ.

— ಗೋಪಾಲಕೃಷ್ಣ ಭಟ್ಟ, ವ್ಯವಸ್ಥಾಪಕ ನಿರ್ದೇಶಕ, ದ್ವಾರಕಾ ಸಮೂಹ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net