ಮಂಗಳೂರು: ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರೀಕ್ಟ್ 317ರ ಸಹಯೋಗದಲ್ಲಿ ಧ್ವನಿ-ನ್ಯೂ ವಾಯ್ಸ ಕಾರ್ಯಕ್ರಮ ಮಾ.20ರಂದು ಮಧ್ಯಾಹ್ನ 2.50 ರಿಂದ 5 ಗಂಟೆಯವರೆಗೆ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಇಬ್ಬರು ಪ್ರಖ್ಯಾತ ಮಹಿಳೆಯರು ಲಯನಿಸಂ, ಅದರ ಲಾಭಗಳು ಹಾಗೂ ಲಯನ್ಸ್ ಕ್ಲಬ್ ಸದಸ್ಯರಾಗುವ ಮೂಲಕ ಅವರು ಸಾಧಿಸಿದ ಯಶೋಗಾಥೆಗಳನ್ನು ಹಂಚಿಕೊಳ್ಳಲಿದ್ದಾರೆ. ಜೊತೆಗೆ ಲಯನ್ಸ್ ಕ್ಲಬ್ ನಡೆಸುತ್ತಿರುವ ಸೇವಾ ಚಟುವಟಿಕೆಗಳು ಹಾಗೂ ಅದರ ತತ್ವಾಧ್ಯಾನಗಳ ಕುರಿತು ಪ್ರಸ್ತುತ ಪಾಠ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮವನ್ನು ಲಯನ್ಸ್ ಡಿಸ್ಟ್ರೀಕ್ಟ್ ಗವರ್ನರ್ ಉದ್ಘಾಟಿಸಲಿರುವರು. ವಕೀಲರು, ಶಿಕ್ಷಕರು, ವಿವಿಧ ವೃತ್ತಿಪರರು ಹಾಗೂ ಇತರರು ಉಪಸ್ಥಿತಿ ಇರುವರು ಎಂದು ಕಾರ್ಯಕ್ರಮ ಸಂಯೋಜಕಿ ವಾಣಿ ಆಳ್ವ ತಿಳಿಸಿದ್ದಾರೆ.