ಮಹಿಳೆಯರು ದಾರಿ ತಪ್ಪುತ್ತಿರುವ ಹೇಳಿಕೆಯ ಒಳಾರ್ಥವೇ ಬೇರೆ ಇದೆ

15SDL4
ಶಿಡ್ಲಘಟ್ಟದಲ್ಲಿನ ಬಿಜೆಪಿ ಕಚೇರಿಯ ಕೈಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿದರು. ಎನ್‌ಡಿಎ ಅಭ್ಯರ್ಥಿ ಮಲ್ಲೇಶ್ ಬಾಬು, ಸಂಸದ ಮುನಿಸ್ವಾಮಿ, ಶಾಸಕ ರವಿಕುಮಾರ್, ಮುಖಂಡ ಸೀಕಲ್ ರಾಮಚಂದ್ರ ಮತ್ತಿತರರು ಇದ್ದರು.
Published on

ಚಿಕ್ಕಬಳ್ಳಾಪುರ: ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಆ ಮಾತಿನ ಒಳಾರ್ಥವೇ ಬೇರೆ ಎಂದು ಹೇಳಿದ್ದಾರೆ.

ಮಹಿಳೆಯರ ಬಗ್ಗೆ ನಮಗೂ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೂ ಅಪಾರವಾದ ಗೌರವವಿದೆ. ಹಾದಿ ತಪ್ಪುವ ವಿಚಾರವಾಗಿ ಹೇಳಿರುವ ಹೇಳಿಕೆಯಲ್ಲಿ ಒಳಾರ್ಥವೇ ಬೇರೆ ಇದೆ. ಇದರಲ್ಲಿ ಕಾಂಗ್ರೆಸ್ ವಿನಾ ಕಾರಣ ರಾಜಕಾರಣ ಬೆರಸುತ್ತಿದೆ. ಲಾಭವನ್ನು ಕಾಣಲು ಬಯಸುತ್ತಿದೆ ಎಂದು ಶಿಡ್ಲಘಟ್ಟದಲ್ಲಿನ ಬಿಜೆಪಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಈ ಬಾರಿ ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಯಾರೂ ಊಹಿಸಲಾಗದ ಅನೇಕ ಬದಲಾವಣೆಗಳಾಗಲಿವೆ. ಕೇಂದ್ರದಲ್ಲಿ ಎನ್‌ಡಿಎ ಮೈತ್ರಿ ಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ ಮತ್ತು ನರೇಂದ್ರ ಮೋದಿ ಅವರು ಮುರನೇ ಭಾರಿಗೆ ಪ್ರಧಾನಿ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಒಂದು ಅಜೆಂಡಾ ಇಲ್ಲ. ಆದರೆ, ಬಿಜೆಪಿಗೆ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಿ, ಭಾರತವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವುದು ಮತ್ತು ಸುಭದ್ರ ರಾಷ್ಟ್ರವನ್ನಾಗಿಸುವ ಗುರಿ ಇದೆ ಎಂದು ಹೇಳಿದ್ದಾರೆ.

*ಆಸೆ ಹುಟ್ಟಿಸಿ, ಕೊನೆಗೆ ಬಿಟ್ಟರು

ಬೆಂಗಳೂರು ಉತ್ತರ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಬೇಕೆಂಬ ಬಯಕೆ ಮೊದಲು ಇರಲಿಲ್ಲ. ಇದರ ನಡುವೆ ಚುನಾವಣೆ ಸಮೀಪ ಬರುತ್ತಿದ್ದಂತೆ ಸ್ವಪಕ್ಷೀಯರೇ ಆಸೆ ಹುಟ್ಟಿಸಿದರು. ಕ್ಷೇತ್ರದ ಅಭ್ಯರ್ಥಿಯಾಗಲು ಒತ್ತಡ ಹೇರಿದರು. ಈ ವಿಚಾರವಾಗಿ ಬಹಳಷ್ಟು ಪದಾಧಿಕಾರಿಗಳ ಒಂದೇ ಆಗಿತ್ತು. ಇದರಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಲಾಯಿತು. ಆದರೆ, ಕೊನೆ ಕ್ಷಣದಲ್ಲಿ ಟಿಕೆಟ್ ಸಿಗಲಿಲ್ಲ. ಆಸೆ ಹುಟ್ಟಿಸಿ, ಬಿಟ್ಟರು ಎಂದು ಮಾಜಿ ಸಿಎಂ ಸದಾನಂದಗೌಡ ಮತ್ತೊಮ್ಮೆ ಬೇಸರವನ್ನು ಹೊರ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net