

ಲಿಂಗಸುಗೂರು: ತಾಲೂಕಿನ ನಾನಾ ಗ್ರಾಪಂಗಳ ವ್ಯಾಪ್ತಿಯಲ್ಲಿ ಕಂಟೆನ್ಮೆಂಟ್, ಬಫರ್ ಜೋನ್, ಕ್ವಾರಂಟೈನ್ ಕೇಂದ್ರಗಳಲ್ಲಿ ಸೌಲಭ್ಯ ಮತ್ತು ನಿರ್ವಹಣೆಯ ಹಣವನ್ನು ಕಂದಾಯ ಇಲಾಖೆ ಪಾವತಿಸಬೇಕೆಂದು ಒತ್ತಾಯಿಸಿ ಪಿಡಿಒಗಳು ಎಸಿ ರಾಜಶೇಖರ ಡಂಬಳರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಕರೋನಾ ವೈರಸ್ ನಿಯಂತ್ರಣಕ್ಕಾಗಿ ಗ್ರಾಮಗಳಲ್ಲಿ ಸ್ವಚ್ಛತೆ, ನೈರ್ಮಲೀಕರಣ, ಕ್ಲೋರಿನೇಷನ್, ದ್ರಾವಣ ಸಿಂಪರಣೆ, ಫಾಗಿಂಗ್ ಸೇರಿ ಮುನ್ನೆಚ್ಚರಿಕೆ ಕ್ರಮವಾಗಿ ಜಾಗೃತಿ ಮೂಡಿಸಲಾಗಿದೆ. ವಲಸೆ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಿಸಿ ನರೇಗಾ ಕೆಲಸ ನೀಡಲಾಗಿದೆ. ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿನ ಜನರಿಗೆ ಊಟ, ಹಾಲು, ಹಣ್ಣು, ಬಿಸ್ಕತ್ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ.
ಸೇವಾಸಿಂಧು, ಕ್ವಾರಂಟೈನ್ ವಾಚ್‌ಅಪ್ ಎಕ್ಸಲ್ ಶೀಟ್ ಎಂಟ್ರಿ ಸೇರಿ ಡೇಟಾ ಎಂಟ್ರಿ ಕೆಲಸ ನಿರ್ವಹಿಸಲಾಗಿದೆ. ಆದರೆ, ನೌಕರರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಏನೂ ಕೆಲಸ ಮಾಡಿಲ್ಲವೆಂದು ಬಿಂಬಿಸುವುದು ಸರಿಯಲ್ಲ. ಕೂಡಲೇ ನಿರ್ವಹಣೆಯ ಖರ್ಚು ನೀಡುವಂತೆ ಒತ್ತಾಯಿಸಿದರು.
ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ಅಣ್ಣಾರಾವ್ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ನಾಯಕ, ತಾಲೂಕು ಅಧ್ಯಕ್ಷೆ ಶೋಭಾರಾಣಿ, ಪಿಡಿಒಗಳಾದ ಬಸವರಾಜ, ತಿಮ್ಮನಗೌಡ, ಸೋಮನಗೌಡ, ನರಸಪ್ಪ, ಮಲ್ಲಿಕಾರ್ಜುನ, ವೆಂಕಟೇಶ ದೇಸಾಯಿ, ಮಂಜುನಾಥ, ಶಶಿಕಲಾ, ವಿಜಯಲಕ್ಷ್ಮಿಸೇರಿ ಇದ್ದರು.