ನಿತ್ಯ 300 ಜನತೆಗೆ ಆಹಾರ ವಿತರಣೆ

SHAHAPUR
Published on

ಯಾದಗಿರಿ: ವಿಶ್ವವವನ್ನು ಬೆಂಬಿಡದೆ ಕಾಡುತ್ತಿರುವ ಹೆಮ್ಮಾರಿ ಕರೊನಾ ವೈರಸ್ ತಡೆಗೆ ಇಡೀ ದೇಶ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ಇಲಾಖೆ ಸಿಬ್ಬಂದಿಗೆ ಹಾಗೂ ಗುಳೆ ಕಾರ್ಮಿಕರಿಗೆ ಶಾಸಕ ಶರಣಬಸಪ್ಪ ದರ್ಶನಾಪುರ ಪ್ರತಿನಿತ್ಯ ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಿದ್ದಾರೆ.

ಕರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಹಾಗೂ ಜನರನ್ನು ಸುರಕ್ಷಿತವಾಗಿಡಲು ಹಗಲಿರಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆ, ಪೌರ ಕಾರ್ಮಿಕರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಆಗಮಿಸುವ ಗುಳೆ ಕಾರ್ಮಿಕರಿಗಾಗಿ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿನಿತ್ಯ ಆಹಾರ ಸಿದ್ಧಪಡಿಸಿ ಪೊಟ್ಟಣಗಳ ಮೂಲಕ ಕುಡಿವ ನೀರು ಹಾಗೂ ಬಾಳೆಹಳ್ಳುಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದರು.

ಏ. 14ರ ವರೆಗೆ ನಿರಂತರವಾಗಿ ಪ್ರತಿದಿನ ಸುಮಾರು 300 ಜನರಿಗೆ ಬಿಸಿಯೂಟ ನೀಡಲಾಗುತ್ತಿದೆ. ಯಾರೂ ಉಪವಾಸದಿಂದ ಇರಬಾರದು ಎಂಬ ಕಾರಣಕ್ಕೆ ಈ ನಿಧರ್ಾರ ಕೈಗೊಳ್ಳಲಾಗಿದ್ದು ನಮ್ಮ ಕಾರ್ಯಕರ್ತರು ಕರ್ತವ್ಯ ನಿರತ ಸಿಬ್ಬಂದಿಗಳ ಸ್ಥಳಕ್ಕೆ ತೆರಳಿ ವಿತರಣೆ ಮಾಡಲಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net