

ಸಿರಿಗೇರಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಚರಕದ ಮೂಲಕ ಬಳಸುತ್ತಿದ್ದ ಖಾದಿ ಬಟ್ಟೆಯನ್ನು ಕೇಳುವವರಿಲ್ಲವಾಗಿದೆ. ರಾಜ್ಯದಲ್ಲಿರುವ 250ಕ್ಕೂ ನೂಲಿನ ಕೇಂದ್ರಗಳು ಬಳಕೆ ಇಲ್ಲದೆ ಧೂಳು ಹಿಡಿದಿವೆ. ಆ ಸಾಲಿನಲ್ಲಿ ಗ್ರಾಮದ ಹುಚ್ಚೇಶ್ವರ ನಗರದಲ್ಲಿರುವ ಅಂಬರ್ ಕ್ರಾಫ್ಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಖಾದಿ ಕೇಂದ್ರವೂ ಒಂದು.
ಇಲ್ಲಿನ ನೂಲಿನ ಕೇಂದ್ರವು 1986ರಲ್ಲಿ ಅಂದಿನ ಶಾಸಕ ಸಿ.ಎಂ.ರೇವಣಸಿದ್ದಯ್ಯ ಸ್ವಾಮಿ ಅವರ ಕಾಲದಲ್ಲಿ 11 ಸದಸ್ಯರು ಇದ್ದ ಕೋ-ಆಪರೇಟಿವ್ ಸೊಸೈಟಿ ಮೂಲಕ ಪ್ರಾರಂಭವಾಯಿತು. 40 ವರ್ಷಗಳಿಂದ ನೇಕಾರರು ಇದೇ ವೃತ್ತಿ ನಂಬಿ ಜೀವನ ಸಾಗಿಸುತ್ತಿದ್ದರು. ವ್ಯಾಪಾರ-ವಹಿವಾಟು ಸರಿಯಾಗಿ ನಡೆಯದೆ, ಸಂಬಳವವಿಲ್ಲದೆ ಈಗ ಬೇರೆಬೇರೆ ಕಾಯಕದಲ್ಲಿ ನೇಕಾರರು ತೊಡಗಿದ್ದಾರೆ. ಕರೊನಾ ಸಮಯದಿಂದ ಸೊಸೈಟಿಯಲ್ಲಿ ಯಾರೂ ನೂಲನ್ನು ನೇಯದೆ ಮನೆಯಲ್ಲಿ ನೇಯುತ್ತಿದ್ದಾರೆ. ಸುಮಾರು 80 ಜನರಿಗೆ ಎಲೆಕ್ಟ್ರಾನಿಕ್ ಚರಕಯಂತ್ರಗಳನ್ನು ಕೊಡಲಾಗಿದೆ. ವಾರ್ಷಿಕವಾಗಿ ಕೆಲ ನೇಕಾರರಿಗೆ ಮಾತ್ರ ಪ್ರೋತ್ಸಾಹ ಧನವಾಗಿ 5000 ರೂ. ಜಮಾ ಆಗುತ್ತಿದೆ.
ಹಿರಿಯರಿಂದ ಮಾಡಿಕೊಂಡು ಬಂದಿದ್ದ ನೂಲುವ ಕೆಲಸವನ್ನು ನಮ್ಮ ತಾಯಿ ಬಿಟ್ಟಿದ್ದಾರೆ. ಈಗ ಸೊಸೈಟಿಯಿಂದ ನೀಡುವ ಎಲೆಕ್ಟ್ರಾನಿಕ್ ನೂಲುವ ಯಂತ್ರಗಳನ್ನು ಮನೆಗೆ ತರಿಸಿಕೊಂಡು ಬಟ್ಟೆ ತಯಾರಿಸಿ ವಾರಕ್ಕೊಮ್ಮೆ ಲೆಕ್ಕ ಕೊಡುತ್ತಿದ್ದೇವೆ. ಸುನೀತಾ, ಗೃಹಿಣಿ ಮಗ್ಗ ನೇಯಿಯುವ ಯಂತ್ರಗಳು ಆಗೋ ಇಗೋ ರಿಪೇರಿ ಬಂದರೆ ಸರಿಪಡಿಸುತ್ತೇನೆ. ಇಲ್ಲಿನ 11 ನೂಲುವ ಯಂತ್ರಗಳನ್ನು ನೋಡಿಕೊಳ್ಳುತ್ತಾ ಬಂದಿದ್ದೇನೆ. ವೇತನ ಕಡಿಮೆ ಇದೆ. ಸೌಲಭ್ಯಗಳಂತೂ ಕೇಳ ಕೂಡದು. ಸರ್ಕಾರ ಇದಕ್ಕೆ ಸ್ಪಂದಿಸಿ, ಪ್ರೋತ್ಸಾಹ ಧನ ಹೆಚ್ಚಿಸಬೇಕು. ಜೆ.ಮಾರೆಪ್ಪ, ಸೊಸೈಟಿ ನಿರ್ದೇಶಕ ಸರ್ಕಾರ ಅನುದಾನ ನೀಡದ ಕಾರಣ ಹೀಗಾಗಿದೆ. ಮಳೆ ಬಂದರೆ ಕಟ್ಟಡ ಒಳಗೆ ನೀರು ನುಗ್ಗಿ ಸಾಮಾಗ್ರಿ ಹಾಳಾಗುತ್ತಿವೆ. ಸಂಬಂಧಿತರೊಂದಿಗೆ ಪತ್ರ ವ್ಯವಹಾರ ನಡೆಸಿದ್ದೇವೆ. ಡಿ.ಜಿ.ಶಿವರಾಜ್, ಕಾರ್ಯದರ್ಶಿ, ಖಾದಿ ಭಂಡಾರದ ಕಚೇರಿ, ಕುರುಗೋಡು.