

ದಸರಾ ಪ್ರಾಧಿಕಾರ ರಚನೆ ಮಾಡಬೇಕು ಎಂದು ಸದನದಲ್ಲಿ ಒತ್ತಾಯಿಸುತ್ತೇನೆ ಎಂದು ಶಾಸಕ ಶ್ರೀವತ್ಸ ಶಾಸಕ ತಿಳಿಸಿದ್ದಾರೆ.
ಈ ಬಾರಿ ಸಿದ್ದರಾಮಯ್ಯ ಅವರು ದಸರಾ ಪ್ರಾಧಿಕಾರ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಅವರು ಯಾವ ಕಾರಣಕ್ಕೆ ಘೋಷಣೆ ಮಾಡಲಿಲ್ಲ ಎನ್ನುವುದು ಗೊತ್ತಿಲ್ಲ.
ಮುಖ್ಯವಾಗಿ ಗ್ಯಾರಂಟಿಗಳ ಜಾರಿಯಿಂದಾಗಿ ದಸರಾ ಪ್ರಾಧಿಕಾರ ಘೋಷಣೆ ಸಾಧ್ಯವಾಗಲಿಲ್ಲವಾ? ಅಥವಾ ಮತ್ತೆ ಯಾವ ಕಾರಣ ಎಂದು ಗೊತ್ತಾಗಿಲ್ಲ. ಬಜೆಟ್ ಸಂಬಂಧ ಸದನದಲ್ಲಿ ಚರ್ಚೆ ನಡೆಯಲಿದ್ದು, ಆ ವೇಳೆ ದಸರಾ ಪ್ರಾಧಿಕಾರ ಮಾಡುವಂತೆ ಒತ್ತಾಯ ಮಾಡುತ್ತೇನೆ. ಯಾವ ಕಾರಣಕ್ಕೆ ಪ್ರಾಧಿಕಾರ ಘೋಷಣೆ ಮಾಡಲಿಲ್ಲ ಎಂದೂ ಪ್ರಶ್ನಿಸುತ್ತೇನೆ. ದಸರಾ ಪ್ರಾಧಿಕಾರ ರಚನೆಗೆ ಸದನದಲ್ಲಿ ಒತ್ತಾಯಿಸುವೆ ಎಂದು ತಿಳಿಸಿದ್ದಾರೆ.