ಸೆ.11ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜನೆ

sports day
Published on

ಮಂಡ್ಯ: ಜಿಲ್ಲೆಯ ಎಲ್ಲ ತಾಲೂಕು ಕ್ರೀಡಾಂಗಣದಲ್ಲಿ ಸೆ.11ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲಾಗಿದೆ.

ಅಥ್ಲೆಟಿಕ್ಸ್ ಸ್ಪರ್ಧೆ: 100 ಮೀ ಓಟ., 200 ಮೀ., 400 ಮೀ., 800 ಮೀ., 1500 ಮೀ., 3,000 ಮೀ(ಮಹಿಳೆಯರಿಗೆ), 5,000 ಮೀ(ಪುರುಷರಿಗೆ), 10,000 ಮೀ ಓಟ, ಉದ್ದಜಿಗಿತ, ಎತ್ತರಜಿಗಿತ, ಗುಂಡುಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 100 ಮೀ ಹರ್ಡಲ್ಸ್, 4*100 ಮೀ ಹಾಗೂ 4*400 ರಿಲೇ. ಗುಂಪು ಸ್ಪರ್ಧೆಗಳು: ವಾಲಿಬಾಲ್, ಫುಟ್‌ಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್, ಯೋಗ ಸ್ಪರ್ಧೆ ಏರ್ಪಡಿಸಲಾಗಿದೆ.

ಕ್ರೀಡಾಕೂಟದಲ್ಲಿ ಭಾಗವಹಿಸುವ ಆಸಕ್ತ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಅಂದು ಬೆಳಗ್ಗೆ 9 ಗಂಟೆಯೊಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ವೈಯಕ್ತಿಕ ಕ್ರೀಡೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದವರು ಹಾಗೂ ಗುಂಪು ಕ್ರೀಡೆಯಲ್ಲಿ ಪ್ರಥಮಸ್ಥಾನ ಪಡೆದವರು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ. ಸ್ಪರ್ಧೆಯನ್ನು ಏರ್ಪಡಿಸಲು ಕನಿಷ್ಟ 4 ತಂಡ ಇರಬೇಕು. ಇಲ್ಲದಿದ್ದಲ್ಲಿ ಆಯ್ಕೆ ನಡೆಸಿ ಮುಂದಿನ ಹಂತಕ್ಕೆ ಕಳುಹಿಸಲಾಗುವುದು.

ಜಿಲ್ಲಾಮಟ್ಟಕ್ಕೆ ಆಯ್ಕೆಯಾಗುವವರು ಕಡ್ಡಾಯವಾಗಿ ಪಾಸ್‌ಪೋರ್ಟ್ ಅಳತೆಯ 2 ಭಾವಚಿತ್ರ, ಆಧಾರ್‌ಕಾರ್ಡ್ ಪ್ರತಿ, ರಾಷ್ಟ್ರೀಕೃತ ಬ್ಯಾಂಕಿನ ಖಾತೆಯ ಪ್ರತಿ ಕೊಡಬೇಕು. ಮಾಹಿತಿಗೆ ಕೆ.ಆರ್.ಪೇಟೆ ತಾಲೂಕು ಪ್ರಭುಕುಮಾರ್(ಮೊ.ಸಂ 7026096535), ನಾಗಮಂಗಲ ತಾಲೂಕು ಎಚ್.ಎಂ.ಸುರೇಶ್(9845164974) ಮತ್ತು ಶಿವಣ್ಣಗೌಡ(9880663171), ಮದ್ದೂರು ತಾಲೂಕು ರಮೇಶ್‌ಪ್ರಭು(9449301010), ಶ್ರೀರಂಗಪಟ್ಟಣ ಸೋಮಶೇಖರ್(9448877854), ಮಳವಳ್ಳಿ ಲೋಕೇಶ್(9611506480) ಮತ್ತು ಲಿಂಗರಾಜು(7090017596), ಪಾಂಡವಪುರ ಬಸವರಾಜು(9880664374), ಮಂಡ್ಯ ತಾಲೂಕು ವಿಜಯಕುಮಾರ್(8660818782) ಮತ್ತು ಕುಮಾರಸ್ವಾಮಿ(9964291080), ದೂ.ಸಂ 08232-224725 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net