

ಮೈಸೂರು: ಮಿಂಚಿನ ವೇಗದಲ್ಲಿ ಓಡುವಲ್ಲಿ ಯಶಸ್ವಿಯಾದ ಮೈಸೂರಿನ ಆರ್.ಪ್ರಜ್ವಲ್ ಹಾಗೂ ಎಚ್.ಆರ್.ನವಮಿ ಕ್ರಮವಾಗಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ 100 ಮೀ. ಓಟ ಸ್ಪರ್ಧೆಯ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ವೇಗ ಓಟಗಾರರಾಗಿ ಹೊರಹೊಮ್ಮಿದರು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಓಟದ ಸ್ಪರ್ಧೆಯಲ್ಲಿ ಆರ್.ಪ್ರಜ್ವಲ್ 11.10 ಸೆಕೆಂಡ್‌ಗಳಲ್ಲಿ ಹಾಗೂ ನವಮಿ 17.78 ಸೆಕೆಂಡ್‌ಗಳಲ್ಲಿ ಓಡುವ ಮೂಲಕ ಪ್ರಥಮ ಸ್ಥಾನ ಪಡೆದರು. ಉಳಿದಂತೆ ಪುರುಷರ 100 ಮೀ.ಓಟದಲ್ಲಿ ಕೆ.ಆರ್.ನಗರದ ಎಸ್.ಪ್ರವೀಣ್ (ದ್ವಿತೀಯ), ಸಿ.ಆರ್.ದೀಕ್ಷಿತ್ (ತೃತೀಯ) ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಮೈಸೂರಿನ ಆರ್.ಹರ್ಷಿಣಿ (ಪ್ರ), ತಿ.ನರಸೀಪುರದ ಶ್ರಾವಣಿ (ದ್ವಿ) ಸ್ಥಾನ ಪಡೆದರು.
ಪುರಷರ ವಿಭಾಗದ ಫಲಿತಾಂಶ
200 ಮೀ.ಓಟ: ಮೈಸೂರಿನ ಜಿ.ಸಿ. ಗುರುಪ್ರಸಾದ್ (ಪ್ರ), ಅಭಿಲಾಷ್ (ದ್ವಿ), ಕೆ.ಆರ್.ನಗರದ ಸಿ.ಆರ್.ದೀಕ್ಷಿತ್ ನಾಯಕ್(ತೃ).
400 ಮೀ.ಓಟ: ಮೈಸೂರಿನ ಜೆ.ಸಿ.ಗುರುಪ್ರಸಾದ್ (ಪ್ರ), ಮಿಲಂದ್ ಎಸ್.ಪ್ರಸಾದ್(ದ್ವಿ), ಕೆ.ಆರ್.ನಗರದ ಗಣೇಶ್‌ಕುಮಾರ್ (ತೃ).
800 ಮೀ.ಓಟ: ಮೈಸೂರಿನ ಭೋಪಣ್ಣ (ಪ), ಹುಣಸೂರಿನ ರಾಹುಲ್ (ದ್ವಿ), ಮೋಹಿತ್ (ತೃ).
1500 ಮೀ.ಓಟ: ಹುಣಸೂರಿನ ರಾಹುಲ್ (ಪ), ಪಿರಿಯಾಪಟ್ಟಣದ ಸಿದ್ದಾನಂದ (ದ್ವಿ), ಕೆ.ಆರ್.ನಗರದ ಪ್ರಶಾಂತ್ (ತೃ).
5000 ಮೀ.ಓಟ: ಹುಣಸೂರಿನ ಸಿ.ಎಸ್.ಲಕ್ಷ್ಮೀಶ್ (ಪ್ರ), ಪಿರಿಯಾಪಟ್ಟಣದ ಪ್ರಮೋದ್ (ದ್ವಿ), ಎ.ಬಿ.ನಿಶಾಂತ್ (ತೃ).
ಉದ್ದ ಜಿಗಿತ: ಮೈಸೂರಿನ ಸಚಿನ್ (ಪ್ರ), ಹುಣಸೂರಿನ ಎಚ್.ಎಂ.ಹರೀಶ್ (ದ್ವಿ), ತಿ.ನರಸೀಪುರದ ಎಸ್.ಪುನೀತ್ (ತೃ).
ಎತ್ತರ ಜಿಗಿತ: ಪಿರಿಯಾಪಟ್ಟಣದ ಯಶ್ವಂತ್ (ಪ್ರ), ತಿ.ನರಸೀಪುರದ ಪ್ರಜ್ವಲ್‌ಕುಮಾರ್ (ದ್ವಿ), ಹುಣಸೂರಿನ ಎಚ್.ಎಂ.ರವೀಶ (ತೃ).
ಗುಂಡು ಎಸೆತ: ಮೈಸೂರಿನ ಮನುಶ್ (ಪ್ರ), ಪಿರಿಯಾಪಟ್ಟಣದ ಕೆ.ಎಂ.ಕಿರಣ್ (ದ್ವಿ), ಕೆ.ಆರ್.ನಗರದ ಮಾರುತಿ (ತೃ).
ಮಹಿಳಾ ವಿಭಾಗದ ಫಲಿತಾಂಶ
200 ಮೀ.ಓಟ: ಮೈಸೂರಿನ ನವಮಿ (ಪ್ರ), ದಿವಿಜಾ ಭಾರಧ್ವಾಜ್ (ದ್ವಿ), ತಿ.ನರಸೀಪುರದ ವರ್ಷಿತಾ (ತೃ).
400 ಮೀ.ಓಟ: ಮೈಸೂರಿನ ಎಚ್.ಎಸ್.ಹರ್ಷಿತಾ (ಪ್ರ), ತಿ.ನರಸೀಪುರದ ಪುಷ್ಪಲತಾ (ದ್ವಿ), ಮೈಸೂರಿನ ಬಿ.ಎಂ. ತಾರುಣ್ಯ (ತೃ).
800 ಮೀ.ಓಟ: ಮೈಸೂರಿನ ಸಹನಾ (ಪ್ರ), ತಿ.ನರಸೀಪುರದ ರಕ್ಷಿತಾ (ದ್ವಿ), ದೀಪಶ್ರೀ(ತೃ).
1500 ಮೀ.ಓಟ: ಸಹನಾ (ಪ್ರ), ತಿ.ನರಸೀಪುರದ ಭಾಗ್ಯಾ (ದ್ವಿ), ಇಂಚರಾ (ತೃ).
3000 ಮೀ.ಓಟ: ತಿ.ನರಸೀಪುರದ ಅಂಕಿತಾ (ಪ್ರ), ಸ್ಮಿತಾ (ದ್ವಿ), ಪಿರಿಯಾಪಟ್ಟಣದ ವರಲಕ್ಷ್ಮೀ (ತೃ).
ಉದ್ದ ಜಿಗಿತ: ಎಚ್.ಡಿ.ಕೋಟೆಯ ದಿಶಾ (ಪ್ರ), ಮೈಸೂರಿನ ಲೇಖನಾ (ದ್ವಿ), ಲಕ್ಷಾ (ತೃ).
ಎತ್ತರ ಜಿಗಿತ: ಮೈಸೂರಿನ ಲಿಸನ್ಯಾ ಮೇರಿ (ಪ್ರ), ಪಿರಿಯಾಪಟ್ಟಣದ ಸಿ.ಎಸ್.ಮಾನಸಾ (ದ್ವಿ), ಬಿ.ಜೆ.ಸಂಜನಾ (ತೃ).
ಗುಂಡು ಎಸೆತ: ಮೈಸೂರಿನ ವಿ.ಅಂಬಿಕಾ (ಪ್ರ), ಶಿಲ್ಪಾ (ದ್ವಿ), ಹುಸೂರಿನ ವರ್ಷಿತಾ (ತೃ).