ತಾಲೂಕು ಮಟ್ಟದಲ್ಲಿ ದಸರಾ ಕ್ರೀಡಾಕೂಟ

13-byd sports
Published on

ಮೈಸೂರು: ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲೆಯ ನಂಜನಗೂಡು, ಎಚ್.ಡಿ.ಕೋಟೆ, ಮೈಸೂರು, ಸರಗೂರು, ಕೆ.ಆರ್.ನಗರ, ಹುಣಸೂರು ಮತ್ತು ಸಾಲಿಗ್ರಾಮ ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ.


ಸೆ. 22 ರಂದು ನಂಜನಗೂಡು ತಾಲೂಕು ಕ್ರೀಡಾಂಗಣದಲ್ಲಿ (ಸಂಚಾಲಕ ಬಾಲು ಮೊ.9731934937ಸಂಪರ್ಕಿಸಬಹು ಹಾಗೂ ಮೈಸೂರು ತಾಲೂಕಿನ ಕ್ರೀಡಾಕೂಟ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿದೆ. (ಮಂಜುನಾಥ್ ಮಾದರ್ 8152904096), 23 ರಂದು ಸರಗೂರು ಬಾಲ್‌ಫಿಲ್ಡ್ ಮೈದಾನ ಮತ್ತು ಲಯನ್ಸ್ ಸ್ಕೂಲ್ ಆವರಣದಲ್ಲಿ ನಡೆಯಲಿದ್ದು,(ಧನುಷ್:7760467004). 25 ರಂದು ಎಚ್.ಟಿ.ಕೋಟೆ ತಾಲೂಕು ಕ್ರೀಡಾಂಗಣದಲ್ಲಿ. (ಕೆ.ಎನ್.ರಾಮಸ್ವಾಮಿ:9449300330), 25 ರಂದು ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಬಿಜಿಎಸ್ ವಿದ್ಯಾಸಂಸ್ಥೆ ಆವರಣದಲ್ಲಿ (ಗಿರೀಶ್: 9964411709 ) ಹಾಗೂ ಹುಣಸೂರು ತಾಲೂಕು ಕ್ರೀಡಾಂಗಣದಲ್ಲಿ (ಬಿ.ಲೋಕೇಶ್: 9449175644) ನಡೆಯಲಿದೆ. 26 ರಂದು ಕೆ.ಆರ್.ನಗರ ತಾಲೂಕು ಕ್ರೀಡಾಂಗಣದಲ್ಲಿ (ಗಿರೀಶ್: 9964411709 ) ಆಯೋಜಿಸಲಾಗಿದೆ.

ಪ್ರತ್ಯೇಕವಾಗಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ವಾಲಿಬಾಲ್, ಕಬಡ್ಡಿ, ಖೋ-ಖೋ, ಯೋಗ, ಥ್ರೋಬಾಲ್, ಫುಟ್‌ಬಾಲ್ ಪಂದ್ಯಾವಳಿ, ಅಥ್ಲೆಟಿಕ್ಸ್‌ನಲ್ಲಿ 100, 200, 400, 800, 1,500, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 4100 ಮೀ ಹಾಗೂ 4400 ಮೀ ರಿಲೇ ಸ್ಪರ್ಧೆಗಳ ನಡೆಯಲಿವೆ. ಜತೆಗೆ ಪುರುಷರಿಗೆ 5,000, 10000 ಮೀ.ಓಟ, 110 ಮೀ. ಹರ್ಡಲ್ಸ್ ನಡೆಯಲಿದೆ. ಮಹಿಳೆಯರಿಗೆ 3,000 ಮೀ. ಓಟ, 100 ಮೀ. ಹರ್ಡಲ್ಸ್ ಓಟ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net