ದಸರಾ ಹಿರಿಯರ ಆಟೋಟ ಸ್ಪರ್ಧೆ ವಿಜೇತರು

Published on

ಮೈಸೂರು: ಹಿರಿಯ ನಾಗರಿಕರಿಗೆ ಆಟೋಟ ಸ್ಪರ್ಧೆಯ 60 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಗುಂಡು ಎಸೆತ ಸ್ಪರ್ಧೆಯಲ್ಲಿ ಸುಬ್ಬಯ್ಯ ಮೊದಲ ಸ್ಥಾನ ಪಡೆದರೆ, ಪೆಮ್ಮಯ್ಯ 2ನೇ ಸ್ಥಾನ ಪಡೆದುಕೊಂಡರು. ವೇಗದ ನಡಿಗೆ ಸ್ಪರ್ಧೆಯಲ್ಲಿ ಮೊಗಪ್ಪ ಪ್ರಥಮ, ಗೋಪಿನಾಥ್ ದ್ವಿತೀಯ ಸ್ಥಾನ ಪಡೆದರು. 70 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಗುಂಡು ಎಸೆತ ಸ್ಪರ್ಧೆಯಲ್ಲಿ ಎಂ.ಪಿ. ಚಂದ್ರಶೇಖರ್(ಪ್ರ), ಶ್ರೀಕಂಠರಾವ್ ಘಾಟ್ಕರ್ (ದ್ವಿ) ಸ್ಥಾನ ಪಡೆದರು. ವೇಗದ ನಡಿಗೆಯಲ್ಲಿ ಚಂದ್ರಶೇಖರ್ (ಪ್ರ) ಹಾಗೂ ಅನಂತರಾಮು (ದ್ವಿ) ಸ್ಥಾನ ಪಡೆದರು.
60 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಮಣಿ (ಪ್ರ), ವಿ.ಕೆ. ರತಿ (ದ್ವಿ) ಸ್ಥಾನ ಪಡೆದರು. ಗುಂಡು ಎಸೆತ ಸ್ಪರ್ಧೆಯಲ್ಲಿ ಸಬೀಹಾ ಹುಣಸೂರು (ಪ್ರ), ಶಾಲಿನಿ (ದ್ವಿ) ಹಾಗೂ ಮ್ಯಾಜಿಕ್ ಕಾರ್ಪೆಟ್‌ನಲ್ಲಿ ಎಂ. ಪಾರ್ವತಿ (ಪ್ರ), ಪಿ. ಪಲ್ಲವಿ (ದ್ವಿ) ಸ್ಥಾನ ಪಡೆದರು. ಬ್ಲಾಸ್ಟ್ ಇನ್ ದಿ ಸಿಟಿ ಸ್ಪರ್ಧೆಯಲ್ಲಿ ಶ್ವೇತಾ ಬಾಯಿ (ಪ್ರ), ಆರ್. ತೇಜಸ್ವಿನಿ (ದ್ವಿ) ಸ್ಥಾನ ಪಡೆದರು. 70 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ಮೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಜೆ. ನೀಲಾ (ಪ್ರ) ಹಾಗೂ ಜಿ. ಪಾರ್ವತಮ್ಮ (ದ್ವಿ) ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net