ಚಿಂಚೋಳಿಯಲ್ಲಿ ದಸರಾ ಕ್ರೀಡಾಕೂಟಕ್ಕೆ ಚಾಲನೆ, 60ಕ್ಕೂ ಅಧಿಕ ತಂಡಗಳು ಭಾಗಿ

IMG-20230927-WA0011
Published on

ಚಿಂಚೋಳಿ: ಸೋಲು ಗೆಲುವಿನ ಸೋಪಾನ ಎಂದು ಅರಿತು ಕ್ರೀಡೆಯಲ್ಲಿ ಸಮನಾಗಿ ಭಾಗವಹಿಸಬೇಕು ಎಂದು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಾಮರಾವ ಯೋಗಾ ಹೇಳಿದರು.

ತಾಲೂಕಿನ ಪೋಲಕಪಳ್ಳಿ ಗ್ರಾಮದ ಬಳಿಯ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿದ ದಸರಾ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ಕ್ರೀಡಾಪಟುಗಳು ತಮ್ಮ ಕ್ರೀಡೆಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ ಎಂದರು.

ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಕ್ರೀಡೆಗಳಲ್ಲಿ ಗೆಲುವು ಸಾಧಿಸಿ ಕ್ಷೇತ್ರಕ್ಕೆ ಕಿರ್ತಿ ತರಬೇಕು ಎಂದು ಮಾತನಾಡಿದರು.

ಇದಕ್ಕೂ ಮುಂಚೆ ಪೋಲಕಪಳ್ಳಿ ಗ್ರಾ.ಪಂ ಅಧ್ಯಕ್ಷೆ ಜಯಮ್ಮ ಪೂಜಾರಿ ದಸರಾ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ದೊಡ್ಡಮನಿ ಕ್ರೀಡಾ ಜ್ಯೋತಿ ಸ್ವೀಕರಿಸಿದರು.

ಈ ಕಾರ್ಯಕ್ರಮದಲ್ಲಿ ಮತೀನ ಸೌದಾಗಾರ, ಚಾಂದಸಾಬ, ಮಲ್ಲಿಕಾರ್ಜುನ ಮಾಳಗಿ, ಶಾಂತಕುಮಾರ, ಬಸವರಾಜ, ಮಹ್ಮದ್ ಶಫಿ, ಗೋವಿಂದ ಸಂಗ್ಯೇದ, ರಾಜಕುಮಾರ ಮುಸ್ತಾರಿ, ನರಸಪ್ಪ, ಮೌಲಾನ ಪಟೇಲ್, ಸಂಜು ಪಾಟೀಲ್, ಇರ್ಮಾನ್, ಶರಣು ಕುಂಬಾರ, ಅಜರ ಸೌದಾಗಾರ ಇತರರು ಇದ್ದರು.

ಕ್ಷೇತ್ರದ ಸುಮಾರು 60 ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದು, ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದವರು ತಪ್ಪದೇ ಅನುಬಂಧ -2 ನಮೂನೆ ಪಡೆಯಬೇಕು. ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ.

- ಮಲ್ಲಿಕಾರ್ಜುನ ನೆಲ್ಲಿ ಕ್ರೀಡಾ ಇಲಾಖೆ ಸಿಬ್ಬಂದಿ ಚಿಂಚೋಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net