

ಮಡಿಕೇರಿ: ಸೆ.೨೨ರಿಂದ ೩೦ರವರೆಗೆ ಮಡಿಕೇರಿ ದಸರಾ ಸಮಿತಿ ಮತ್ತು ನಗರ ದಸರಾ ಕ್ರೀಡಾ ಸಮಿತಿ ವತಿಯಿಂದ ಮಡಿಕೇರಿ ದಸರಾ ಕ್ರೀಡಾಕೂಟ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ತಿಳಿಸಿದರು.
ಸೆ.೨೨ರಂದು ಬೆಳಗ್ಗೆ ೬ ಗಂಟೆಗೆ ಪುರುಷರಿಗೆ, ಮಹಿಳೆಯರಿಗೆ ರಸ್ತೆ ಓಟ ನಡೆಯಲಿದೆ. ನಂತರ ವಿವಿಧ ವಿಭಾಗಗಳಲ್ಲಿ ಜನರಲ್ ತಿಮ್ಮಯ್ಯ ವೃತ್ತದಿಂದ ನಿರುಕೊಲ್ಲಿಯವರೆಗೆ ನಡೆಯಲಿದೆ. ಸೆ.೨೩ರಂದು ಬಾಸ್ಕೆಟ್ ಬಾಲ್(ಪುರುಷರಿಗೆ)ಮತ್ತು ಫುಟ್ಬಾಲ್ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಸೆ.೨೪ರಂದು ಬನ್ನಿಮಂಟಪದಿಂದ ಕ್ರೀಡಾಜ್ಯೋತಿ ತರಲಾಗುವುದು. ಸೆ.೨೪ರಂದು ವಯೋಮಿತಿ ಆಧಾರದಲ್ಲಿ ವಿವಿಧ ಸ್ಪರ್ಧೆ ನಡೆಯಲಿದೆ. ಸೆ.೨೫ರಂದು ಕೂರ್ಗ್ ಎಂಟರ್‌ಪ್ರೈಸಸ್ ಕಟ್ಟಡದಲ್ಲಿ ಸ್ನೂಕರ್ ಪಂದ್ಯ ನಡೆಯಲಿದೆ. ಸೆ.೨೫ರಂದು ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಸೆ.೨೬ರಂದು ನಗರದ ರಾಜ್‌ದರ್ಶನ್ ಹೊಟೇಲ್ ಸಭಾಂಗಣದಲ್ಲಿ ಚೆಸ್ ಪಂದ್ಯಾಟ, ಕೇರಂ ಪಂದ್ಯಾಟ ನಡೆಯಲಿದೆ. ಸೆ.೨೮ರಂದು ಗಾಂದಿ ಮೈದಾನದಲ್ಲಿ ಮಡ್ ಕಬಡ್ಡಿ, ಸೆ.೨೯ ರಂದು ರಾಜ್‌ದರ್ಶನ್ ಹೋಟೆಲ್ ಸಭಾಂಗಣದಲ್ಲಿ ದೇಹದಾಡ್ಯ ಸ್ಪರ್ಧೆ, ಸೆ.೩೦ರಂದು ಜಿಲ್ಲಾ ಕ್ರೀಡಾಂಗಣದ ಸಮೀಪವಿರುವ ಬಾಕ್ಸಿಂಗ್ ಕ್ರೀಡಾಂತಣದಲ್ಲಿ ಕಿಕ್ ಬಾಕ್ಸಿಂಗ್ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ದಸರಾ ಕ್ರೀಡಾ ಸಮಿತಿಯ ಪ್ರದಾನ ಕಾರ್ಯದರ್ಶಿ ಕಪಿಲ್ ಕುಮಾರ್, ಉಪಾಧ್ಯಕ್ಷರಾದ ಉಮೇಶ್, ಕೆ.ಆರ್.ದಿನೇಶ್ ಶೆಟ್ಟಿ, ಪ್ರಮುಖರಾದ ಜಿ.ಎಸ್.ಕೃಷ್ಣ, ಎಂ.ಪಿ.ನಿರಂಜನ್ ಉಪಸ್ಥಿತರಿದ್ದರು.