

ಹೊರ್ತಿ: ಸಮೀಪದ ಕನ್ನೂರ ಗ್ರಾಮದ ಆದಿಶಕ್ತಿ ಮತ್ತು ಲಕ್ಷಿ$್ಮ ದೇವಸ್ಥಾನ ಸೇವಾ ಸಮಿತಿಯಿಂದ 71ನೇ ವರ್ಷದ ನಮ್ಮೂರ ದಸರಾ ಉತ್ಸವ ನಿಮಿತ್ತ ಗುರುವಾರ ತುಳಜಾಪುರದಿಂದ ಶಾಂತಿ ಸದ್ಭಾವನಾ ಜೋತಿ ತರಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಧ್ಯಾಹ್ನ ಆದಿಶಕ್ತಿ ದೇವಿಯ ಭವ್ಯ ಮೆರವಣಿಗೆ ಜರುಗಿತು. ವಿಜಯಪುರ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದೊಂದಿಗೆ ಆಲಮೇಲ ಗ್ರಾಮದ ದತ್ತು ಡೊಳ್ಳಿನ ಸಂದಿಂದ ಡೊಳ್ಳು ಕುಣಿತ, ಆಲಗೂರದ ಆದಿಶಕ್ತಿ ಬ್ರಾಸ್ ಬ್ಯಾಂಡ್ ಮ್ಯೂಜಿಕಲ್ ಕಂಪನಿ, ಕನ್ನೂರ ಗ್ರಾಮದ ಶಿವಲಿಂಗೇಶ್ವರ ಹಲಗೆ ಮೇಳ ಹಾಗೂ ಕನ್ನೂರ ಗ್ರಾಮದ ಭಂಜತ್ರಿ ಕಲಾ ಬಳಗದೊಂದಿಗೆ ಮೆರವಣಿಗೆ ನಡೆಯಿತು. ನಂತರ ಕನ್ನೂರ ಗುರುಮಠದ ಸೋಮನಾಥ ಶಿವಾಚಾರ್ಯರಿಂದ ಸಕಲ ಪೂಜಾ ವಿಧಿ&ವಿಧಾನಗಳೊಂದಿಗೆ ಆದಿಶಕ್ತಿ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. ಪ್ರತಿದಿನ ಮಹಾ ಪ್ರಸಾದ ಇರುತ್ತದೆ.
ಅ.6 ರಂದು ರಾತ್ರಿ ಇಂಗಳೇಶ್ವರ ರೇಣುಕಾ ಯಲ್ಲಮ್ಮ ಅವರಿಂದ ಚೌಡಕಿ ಪದಗಳು ನಡೆಯಲಿವೆ. ಅ.8 ರಂದು ರಾತ್ರಿ 10 ಗಂಟೆಗೆ ರಾಜ್ಯ ಪ್ರಶಸ್ತಿ ಪುರಸತ ಸಾಗರ ಮಾನೆ ಇಂಡಿ ಹಾಗೂ ಸಂಗಡಿಗರಿಂದ ಗೊಂದಲ ಕಾರ್ಯಕ್ರಮ ಜರುಗುವುದು.
ನವರಾತ್ರಿ ನಿಮಿತ್ತ ಪ್ರತಿದಿನ ಬೆಳಗ್ಗೆ, ಸಂಜೆ ಮಹಾಪೂಜೆ, ಮಹಾಮಂಗಳಾರತಿ ಮತ್ತು ಉಡಿತುಂಬುವ ಕಾರ್ಯಕ್ರಮ ಭಕ್ತಿಪೂರ್ವಕ ಕಾರ್ಯಕ್ರಮ ನಡೆಯಲಿವೆ.