

ದಸರಾ ಪ್ರಾಧಿಕಾರ ರಚನೆ ಮಾಡಿದರೆ ನಿರಂತರವಾಗಿ ಕಾರ್ಯಕ್ರಮಗಳ ಸಂಘಟಿಸಲು ಅನುಕೂಲವಾಗಲಿದೆ ಎಂದು ಯೋಗ ಫೆಡರೇಷನ್ ಆಫ್ ಮೈಸೂರು ಕಾರ್ಯದರ್ಶಿ ಡಾ.ಪಿ.ಎನ್.ಗಣೇಶ್ ಕುಮಾರ್ ಹೇಳಿದ್ದಾರೆ.
ಮೈಸೂರು ದಸರಾ ಉತ್ಸವ ಜಾಗತಿಕ ಮನ್ನಣೆ ಪಡೆದಿದೆ. ದಸರಾ ಪ್ರಾಧಿಕಾರ ರಚಿಸಿದರೆ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ನಿರಂತರವಾಗಿ ಕಾರ್ಯಕ್ರಮಗಳ ಆಯೋಜನೆಗೆ ಅನುಕೂಲವಾಗುತ್ತದೆ. ಇದರ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೂ ಅವಕಾಶ ದೊರೆಯಲಿದೆ. ಪ್ರತಿ ಸಲ ದಸರಾ ಸಂದರ್ಭದಲ್ಲಿ ತರಾತುರಿಯಲ್ಲಿ ಸಿದ್ಧತೆ ಮಾಡಿಕೊಳ್ಳುವುದು ನಿಲ್ಲುತ್ತದೆ. ವ್ಯವಸ್ಥಿತವಾಗಿ ದಸರಾ ಸಿದ್ಧತೆ ನಡೆಯುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಆಲೋಚಿಸಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಬಜೆಟ್‌ನಲ್ಲಿ ತವರು ಜಿಲ್ಲೆಗೆ ತಕ್ಕಮಟ್ಟಿಗೆ ಕೊಡುಗೆ ನೀಡಿದ್ದಾರೆ. ಶ್ರೀ ಚಾಮುಂಡೇಶ್ವರಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ಮಾಡಿರುವುದು ಖುಷಿಯ ವಿಚಾರ. ಇದರ ಜತೆಗೆ ದಸರಾ ಪ್ರಾಧಿಕಾರವನ್ನು ಘೋಷಣೆ ಮಾಡಲಿ. ಆಗ ಮೈಸೂರು ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಒತ್ತಾಯಿಸಿದ್ದಾರೆ.