ವರ್ಷದಲ್ಲೇ ಕುಡಿಯುವ ನೀರು

19MDLG1
Published on

ಮೂಡಲಗಿ: ಅರಬಾವಿ, ಕಲ್ಲೋಳಿ, ನಾಗನೂರು ಮತ್ತು ಮೂಡಲಗಿ ಪಟ್ಟಣಗಳ ವ್ಯಾಪ್ತಿಯ ಸಾರ್ವಜನಿಕರಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಅಮತ ಯೋಜನೆಗೆ ಚಾಲನೆ ನೀಡಲಾಗಿದ್ದು, ಒಂದು ವರ್ಷದೊಳಗೆ ಕಾಮಗಾರಿ ಮುಗಿದು ಮನೆ ಮನೆಗೆ ನೀರು ತಲುಪಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ಅರಬಾವಿ ಪಟ್ಟಣದ ಆಂಜನೇಯ ದೇವಸ್ಥಾನದ ಬಳಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಮತ 2.0 ಯೋಜನೆಯಡಿ 140.69 ಕೋಟಿ ರೂ. ವೆಚ್ಚದಲ್ಲಿ ಅರಬಾವಿ, ಕಲ್ಲೋಳಿ, ನಾಗನೂರು ಪಟ್ಟಣ ಪಂಚಾಯಿತಿ ಮತ್ತು ಮೂಡಲಗಿ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜನರಿಗೆ ಕುಡಿಯುವ ನೀರು ಒದಗಿಸುವ 20 ವರ್ಷಗಳ ಕನಸು ಈಡೇರಲಿದೆ. ಮುಂಬರುವ ದಿನಗಳಲ್ಲಿ ನಾಲ್ಕು ಪಟ್ಟಣಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.

ಅರಬಾವಿ ಕ್ಷೇತ್ರಕ್ಕೆ ಮೊದಲ ಬಾರಿಗೆ ಶಾಸಕನಾದಾಗ ಎಸ್.ಎಂ.ಕಷ್ಣ ಮುಖ್ಯಮಂತ್ರಿಯಾಗಿದ್ದರು. ಆಗ ರಾಜ್ಯದಲ್ಲಿ ಭೀಕರ ಬರ ಎದುರಾಗಿತ್ತು. ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ಆಗ ಹಡಗಿನಾಳ ಗ್ರಾಮದ ಹಿರಿಯರೊಬ್ಬರು ಹಿಡಕಲ್ ಜಲಾಶಯದಿಂದ ನೀರು ತಗೊಂಡು ಬನ್ನಿ ಎಂದು ಸಲಹೆ ನೀಡಿದ್ದರು. ಅದರಂತೆ ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗುತ್ತಿದೆ. ಅಮತ ಯೋಜನೆಗೆ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಜೂರಾತಿ ನೀಡಿದ್ದರು. ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯೋಜನೆಯು ಕಾರ್ಯಗತವಾಗುತ್ತಿದೆ ಎಂದು ತಿಳಿಸಿದರು.

ಶಿರಢಾನ ಗ್ರಾಮದ ಹತ್ತಿರ (ಝಂಗಟಿಹಾಳ) ಘಟಪ್ರಭಾ ನದಿಯ ಎಡದಂಡೆಯಲ್ಲಿ ಜಾಕವೆಲ್, ಇಂಟೆಕ್‌ವೆಲ್ ಮತ್ತು ಇಂಟೆಕ ಕೊಳವೆ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು. ಶಾಸಕರನ್ನು ಸನ್ಮಾನಿಸಲಾಯಿತು. ವೇದಮೂರ್ತಿ ಶಿವಯ್ಯ ಹಿರೇಮಠ, ಅರಬಾವಿ ಪಪಂ ಅಧ್ಯಕ್ಷೆ ರೇಣುಕಾ ಮಾದರ, ಉಪಾಧ್ಯಕ್ಷೆ ರಾಜಶ್ರೀ ಗಂಗಣ್ಣವರ, ಮೂಡಲಗಿ ಪುರಸಭೆ ಅಧ್ಯಕ್ಷೆ ಖುರ್ಷಾದ್ ನದ್ಾ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಗಜಾನನ ಯರಗಣಿ, ಬಸವಂತ ದಾಸನ್ನವರ, ಸುಭಾಸ್ ಕ್ಯತೆನ್ನವರ, ಶಂಕರ ಬಿಲಕುಂದಿ,

ರಮೇಶ ಮಾದರ, ಮುತ್ತೆಪ್ಪ ಜಲ್ಲಿ, ರಾಮಪ್ಪ ಹಂದಿಗುಂದ, ರವಿ ಸಣ್ಣಕ್ಕಿ, ಹಣಮಂತ ಗುಡಲಮನಿ, ಗಣಪತಿ ಇಳಿಗೇರಿ, ಸುಭಾಸ ಕುರಬೇಟ, ಪ್ರಶಾಂತ ನಿಡಗುಂದಿ, ಪಪಂ ಮತ್ತು ಪುರಸಭೆ ಸದಸ್ಯರು, ಮುಖ್ಯಾಧಿಕಾರಿಗಳಾದ ವಿನಾಯಕ ಬಬಲೇಶ್ವರ, ತುಕಾರಾಂ ಮಾದರ, ಚಿದಾನಂದ ಮುಗಳಖೋಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net