ಹುಬ್ಬಳ್ಳಿ: ಇಲ್ಲಿಯ ದಾಜಿಬಾನಪೇಟ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿರುವ ಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಇತ್ತಿಚೆಗೆ ಸಂಭ್ರಮದಿಂದ ನಡೆಯಿತು.
ಅತಿಥಿಯಾಗಿದ್ದ ಉಪನಗರ ಠಾಣೆ ಇನ್ಸಪೆಕ್ಟರ್ ಮಲ್ಲಪ್ಪ ಹೂಗಾರ ಮಾತನಾಡಿ, ಮಕ್ಕಳ ಕಾರ್ಯ ಚಟುವಟಿಕೆಗಳ ಮೇಲೆ ಮನೆಯಲ್ಲಿ ಪಾಲಕರು, ಶಾಲೆಯಲ್ಲಿ ಶಿಕ್ಷಕರು ನಿಗಾ ಇಡಬೇಕು. ಇದರಿಂದ ವಿದ್ಯಾರ್ಥಿಗಳನ್ನು ದುಶ್ಚಟಗಳಿಂದ ದೂರ ಇಡಲು ಸಾಧ್ಯ ಎಂದರು.
ದೇವಸ್ಥಾನದ ಜಂಟಿ ಕಾರ್ಯದರ್ಶಿ ಎನ್.ಆರ್. ಹಬೀಬ ಮಾತನಾಡಿ, ಓದಿನ ಮಹತ್ವ ಬಹಳಷ್ಟಿದೆ, ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ನಿಗಾ ಇಡಬೇಕು ಎಂದರು.
ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ, ವಿದ್ಯಾಥಿರ್ಗಳು ದುಶ್ಚಟಕ್ಕೆ ಬಲಿಯಾಗದೇ ಅಧ್ಯಯನದ ಕಡೆ ಗಮನ ಕೊಡಬೇಕು. ಮನೆಯಲ್ಲಿ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಉಮಾ ಎಂ. ಹೂಗಾರ ಅವರು ಮಾತನಾಡಿದರು.
ಶಾಲೆ ಆಡಳಿತ ಮಂಡಳಿ ಚೇರ್ಮನ್ ಟಿ.ಎನ್. ಧೋಂಗಡಿ, ದೇವಸ್ಥಾನದ ಟ್ರಸ್ಟಿಗಳಾದ ಎ.ಪಿ. ಪವಾರ, ನೀಲಕಂಠ ಜಡಿ, ಎ.ಕೆ. ಕಲಬುಗಿರ್ ಇತರರು ಉಪಸ್ಥಿತರಿದ್ದರು.
ಶಿಕ್ಷಕಿ ವಿಮಲಾ ಧೋಂಗಡಿ, ಶೈಲಜಾ ಶಂಕರಶೆಟ್ಟಿ, ಶಾಂತಕುಮಾರಿ, ರಾಜೇಶ್ವರಿ ಚಂದ್ರಗಿರಿ ಪಾರಿತೋಷಕ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು.
ಶಿಕ್ಷಕಿ ಯು.ವಿ. ಪಲ್ಲೇದ ಸನ್ಮಾನ ಸಮಾರಂಭ ನಡೆಸಿಕೊಟ್ಟರು. ಶಿಕ್ಷಕಿ ಮಧುಮತಿ ಉಮಚಗಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಾಧ್ಯಾಪಕ ಜೆ.ಎಸ್. ಹೂಗಾರ ಸ್ವಾಗತಿಸಿದರು. ಜಯಶ್ರೀ ಲದವಾ ವಂದಿಸಿದರು.
ರಮ್ಯಾ ಪೂಜಾರ, ವರ್ಷಾ ಜರಾತರರ, ಸೌಮ್ಯ ಪಾಲನಕರ, ನಂದಿತಾ ಇಂಡಿ, ಸ್ನೇಹಾ ಮೆಹರವಾಡೆ ಇತರರು ಸಾಂಸತಿಕ ಕಾರ್ಯಕ್ರಮ ನೆರವೇರಿಸಿದರು.