ದುರ್ಗಾಮಹೇಶ್ವರಿ ಅಂಬಾರಿ ಉತ್ಸವ

Untitled-1
Published on

ವಿಜಯಪುರ : ನವರಾತ್ರಿ ಅಂಗವಾಗಿ ಗಡ್ಡದನಾಯಕನಹಳ್ಳಿಯ ದುರ್ಗಮಹೇಶ್ವರಿ ದೇವಾಲಯದಲ್ಲಿ ದುರ್ಗಾಮಾತೆಯನ್ನು ಮಂಗಳವಾರ ಅಂಬಾರಿಯಲ್ಲಿ ಮೆರವಣಿಗೆ ಮಾಡಲಾಯಿತು. ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆಯುತ್ತಿದ್ದು, ದೇವಾಲಯವನ್ನು ವಿವಿಧ ಪುಷ್ವಗಳಿಂದ ಅಂಲಕಾರ ಮಾಡುವುದರೊಂದಿಗೆ ದುರ್ಗಮಹೇಶ್ವರಿ ಅಮ್ಮನವರನ್ನು ಹೂ ಹಾಗೂ ವಜ್ರಾಭರಣಗಳಿಂದ ಅಲಂಕರಿಸಲಾಗಿತ್ತು.

ವಿವಿಧ ಧಾರ್ಮಿಕ ಕಾರ್ಯಕ್ರಮ: ವೇದಪಾರಾಯಣ, ಗಣಪತಿ ಪೂಜೆ, ಕಲಶಾರಾಧನೆ, ಸ್ವಸ್ತಿಪುಣ್ಯಾಹ ವಚನ, ದೇವನಂದಿ, ಪಂಚಗವ್ಯ ರಾ ಬಂಧನ, ಗಣಪತಿಹೋಮ, ನವಗ್ರಹಹೋಮ, ಚಂಡಿಕಾಹೋಮ, ಮಹಾಪೂರ್ಣಾಹುತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ದಿವ್ಯ ಅಲಂಕಾರ, ಮಹಾಮಂಗಳಾರತಿ ನಡೆಯಿತು.

ಕಲಾ ತಂಡಗಳ ನಡುವೆ ಅಂಬಾರಿ: ಅಮ್ಮನವರ ಉತ್ಸವ ಮೂರ್ತಿಯನ್ನು ಅಲಂಕರಿಸಿ ಅಂಬಾರಿಯಲ್ಲಿ ಕುಳ್ಳಿರಿಸಿ ವಿವಿಧ ಕಲಾ ತಂಡಗಳು, ಗ್ರಾಮ ದೇವತೆಗಳ ಪಲಕ್ಕಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ನಡೆಸಲಾಯಿತು. ಮೆರವಣಿಗೆ ವೇಳೆ ಸಾವಿರಾರು ಭಕ್ತರು ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲ್ಲಿಸಿದರು.

ಕಲಾ ತಂಡಗಳ ಮೆರುಗು : ವಿವಿಧ ಕಲಾ ತಂಡಗಳ ಪ್ರದರ್ಶನ ಭಕ್ತರ ಮನಸೂರೆಗೊಳಿಸಿತು, ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಕೇರಳ ವಾದ್ಯಗೋಷ್ಟಿ ಆಕರ್ಷಕವಾಗಿತ್ತು. ದುರ್ಗಾ ಮಹೇಶ್ವರಿ ಜಾತ್ರೋತ್ಸವದ ಪ್ರಯುಕ್ತ ಹರಿಕಥೆ ವಿದ್ವಾನ್​ ಶೀಲಾ ನಾಯ್ಡು ಅವರಿಂದ ಹರಿಕಥೆ ಏರ್ಪಡಿಸಲಾಗಿತ್ತು. ದೇವಾಲಯ ಸಮಿತಿಯಿಂದ ಸಾವಿರಾರು ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿ ವರ್ಷವೂ ಅಮ್ಮನವರಿಗೆ ನವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಅಮ್ಮನವರನ್ನು ಅಂಬಾರಿಯಲ್ಲಿ ನೋಡಲೆಂದು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಸೇರಿ ಸುತ್ತಮುತ್ತಲಿನಿಂದ ಲಾಂತರ ಭಕ್ತರು ಆಗಮಿಸುತ್ತಾರೆ. | ನಾಗರಾಜಪ್ಪಸ್ವಾಮಿ ಪ್ರಧಾನ ಅರ್ಚಕ ಗ್ರಾಮೀಣ ಭಾಗದಲ್ಲಿ ಹೆಚ್ಚು ಶಕ್ತಿಶಾಲಿಯಾಗಿರುವ ದುರ್ಗಾಮಹೇಶ್ವರಿ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದಸರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರುತ್ತಿದೆ. ನಾನು ಈ ದೇವಿಯ ಭಕ್ತನಾಗಿದ್ದು, ಒಳಿತು ಕಂಡಿದ್ದೇನೆ. ಭಕ್ತಿಭಾವದಿಂದ ಪೂಜಿಸಿದರೆ, ಇಷಾರ್ಥಗಳು ನೆರವೇರುವುದರಲ್ಲಿ ಸಂಶಯವಿಲ್ಲ | ಪ್ರದಿಪ್​ ಈಶ್ವರ್​ ಚಿಕ್ಕಬಳ್ಳಾಪುರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net