ದುರ್ಗದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ನಾಳೆ

dvd babuali
ಬಾಬು ಅಲಿ
Published on

ದೇವದುರ್ಗ: ಪಟ್ಟಣದ ಖೇಣೇದ್ ಮುರಿಗೆಪ್ಪ ಸಭಾಂಗಣದಲ್ಲಿ ಜು.21ರಂದು ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ನಾಲ್ವರು ಪತ್ರಕರ್ತರಿಗೆ ದುರ್ಗದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬಾಬು ಅಲಿ ಕರಿಗುಡ್ಡ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಿ. ಎ.ವೆಂಕಟೇಶ ನಾಯಕ ಸ್ಮರಣಾರ್ಥ ಕೊಡಮಾಡುವ ತಾಲೂಕು ಮಟ್ಟದ ದುರ್ಗದ ಸಿರಿ ಪ್ರಶಸ್ತಿಯನ್ನು ವರದಿಗಾರರಾದ ಮಹಾಂತೇಶ ಹಿರೇಮಠ, ನಾಗರಾಜ ಮನ್ನಾಪುರ, ಸಚ್ಚಿದಾನಂದ ನಾಯಕ, ನಿರಂಜನ್ ಮಸರಕಲ್‌ಗೆ ನೀಡಲಾಗುವುದು. ಮಾಜಿ ಸಂಸದ ಬಿ.ವಿ.ನಾಯಕ ಪ್ರಶಸ್ತಿ ಪ್ರದಾನ ಮಾಡುವರು ಎಂದು ತಿಳಿಸಿದರು.

ಶಾಸಕಿ ಕರೆಮ್ಮ ಜಿ.ನಾಯಕ ಕಾರ್ಯಕ್ರಮ ಉದ್ಘಾಟಿಸುವರು. ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ಜಿಲ್ಲಾ ಕಾರ್ಯದರ್ಶಿ ಪಾಷಾ ಹಟ್ಟಿ, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ತಾಲೂಕು ಅಧ್ಯಕ್ಷ ಬಾಬುಅಲಿ ಕರಿಗುಡ್ಡ, ಕಾರ್ಯದರ್ಶಿ ನಾಗರಾಜ ಸುಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ಸೂಗೂರೇಶ ಗುಡಿ, ಅಲಿಬಾಬಾ ಪಟೇಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಶಾಂತಪ್ಪ ಹೆಂಬೆರಾಳ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಲಕ್ಷ್ಮಣ ಜ್ಯೋತಿ ಸೇರಿದಂತೆ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಾರ್ಯದರ್ಶಿ ನಾಗರಾಜ ಸುಟ್ಟಿ, ಪತ್ರಕರ್ತರಾದ ನರಸಿಂಗ್‌ರಾವ್ ಸರ್ಕೀಲ್, ಬೆಳ್ಳೆಪ್ಪ ಬಲ್ಲಿದವ್, ನಾಗರಾಜ ತೇಲ್ಕರ್, ಮಾರ್ಕಂಡಯ್ಯ ನಾಡದಾಳ, ಸುರೇಶಗೌಡ ವಟಗಲ್, ಗುರುನಾಥ ಇಂಗಳದಾಳ, ಆನಂದ ಗುಡಿ, ನಾಗರಾಜ, ಮಹಾಂತೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net