

ಮಂಗಳೂರು: ನಗರದ ಜೈಲು ರಸ್ತೆಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ಶಂಕರ ಜಯಂತಿ ಅಂಗವಾಗಿ ವೇ.ಮೂ. ಪಾವಂಜೆ ಸುಬ್ರಹ್ಮಣ್ಯ ಭಟ್ಟರ ನೇತೃತ್ವದಲ್ಲಿ ಶ್ರೀ ದುರ್ಗಾಪೂಜೆ ಜರುಗಿತು.
ಇನ್ನ ಶ್ರೀನಿವಾಸ ರಾವ್ ಮತ್ತು ಪುಷ್ಪಾವತಿ ದಂಪತಿ ಉಪಸ್ಥಿತಿಯಲ್ಲಿ ಶ್ರೀ ಸುಬ್ರಹ್ಮಣ್ಯ ಸಭಾ ಸಭಾ ದ ಅಧ್ಯಕ್ಷ ಹರ್ಷ ಕುಮಾರ್ ಕೇದಿಗೆ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಪ್ರಾರ್ಥನೆಯೊಂದಿಗೆ ಅರಂಭಿಸಲಾಯಿತು. ಬಳಿಕ ಶ್ರೀ ದುರ್ಗಾ ಸಹಸ್ರನಾಮ, ಶಂಕರ ಅಷ್ಟೋತ್ತರ, ಶಾರಾದಾಂಬ ಭಜನಾ ಮಂಡಳಿ ಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಶ್ರೀ ಸುಬ್ರಹ್ಮಣ್ಯ ಸಭಾದ ನಿರ್ದೇಶಕ ನಾಗರಾಜ್ ವರ್ಕಾಡಿ ಅವರು ಶಂಕರ ಭಗವದ್ಪಾದರ ಜೀವನ ಚರಿತ್ರೆ ಮತ್ತು ಅವರ ತತ್ವ, ಆದರ್ಶಗಳನ್ನು ನಾವು ಮೈಗೂಡಿಸಕೊಳ್ಳಬೇಕೆಂದರು. ಅವರನ್ನು ಶ್ರೀ ಸಭಾದ ಪಧಾಧಿಕಾರಿಗಳು ಗೌರವಿಸಿದರು.
ಅರುಣಾ ಸೋಮಶೇಖರ್ ಉಪನ್ಯಾಸಕರನ್ನು ಪರಿಯಿಚಿಸಿದರೆ,ಯುವವೇದಿಕೆ ಉಪಾಧ್ಯಕ್ಷ ಸುರೇಶ್ ಕಡಬ ಕಾರ್ಯಕ್ರಮ ನಿರೂಪಿಸಿದರು. ಸಭಾ ನಿರ್ದೇಶಕ ರಘುವೀರ್ ಪೆರ್ಡೂರ್, ಯುವ ವೇದಿಕೆ ಅಧ್ಯಕ್ಷ ಅನಿಲ್ ನೆಲ್ಲಿಕುಂಜೆ,ಮಹಿಳಾ ವೇದಿಕೆ ಅಧ್ಯಕ್ಷೆ ಕುಸುಮಾ ನವೀನ್ ಮೊದಲಾದವರಿದ್ದರು.