ದುರ್ಗಾಪರಮೇಶ್ವರಿ ಸಂಭ್ರಮ ರಥೋತ್ಸವ

13 kpp 1
ಕೊಪ್ಪದ ಹುಲ್ಲುಮಕ್ಕಿ ದುರ್ಗಾಪರಮೇಶ್ವರಿ ಮತ್ತು ಗುತ್ತ್ಯಮ್ಮನವರ ರಥೋತ್ಸವ ನಡೆಯಿತು.
Published on

ಕೊಪ್ಪ: ಹುಲ್ಲುಮಕ್ಕಿ ದುರ್ಗಾಪರಮೇಶ್ವರಿ ಮತ್ತು ಗುತ್ತ್ಯಮ್ಮನವರ ರಥೋತ್ಸವ ಶನಿವಾರ ಸಂಭ್ರಮದಿಂದ ನಡೆಯಿತು.

ಬೆಳಗ್ಗೆ ದೇವರಿಗೆ ಹೂವಿನ ವಿಶೇಷ ಅಲಂಕಾರ ಮಾಡಲಾಯಿತು. ಕೆಂಡಾರ್ಚನೆ, ಮಧ್ಯಾಹ್ನ ಮಹಾರಥಾರೋಹಣ ನಡೆಯಿತು. ಈ ಸಂದರ್ಭದಲ್ಲಿ ಭಕ್ತರು ರಥಕ್ಕೆ ದವಸ, ಧಾನ್ಯ ಎರಚಿ ಜಯಘೋಷ ಕೂಗಿದರು. ಹಣ್ಣು, ಕಾಯಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಸಾರ್ವಜನಿಕ ಅನ್ನ ಸಂತರ್ಪಣೆ ಮಾಡಲಾಯಿತು.
ಸಂಜೆ ವಿಶೇಷ ಪೂಜೆ, ಅರ್ಚನೆ, ಸೀತೂರು ವಿನಾಯಕ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಆಯೋಜಿಸಲಾಗಿತ್ತು. ಏ.14ರಂದು ಬೆಳಗ್ಗೆ ಕುಂಕುಮೋತ್ಸವ, ಅವಭ್ರತ ಸ್ನಾನ, ಸಂಜೆ 6ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದೆ. 15ರಂದು ಬೆಳಗ್ಗೆ ಸಂಪ್ರೋಕ್ಷಣೆ, ನಾಗ ದೇವರಿಗೆ ವಿಶೇಷ ಪೂಜೆ, ರಾತ್ರಿ ಆಶ್ಲೇಷ ಬಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net