ಸಂಸ್ಕಾರ ಸಂಸ್ಕೃತಿಯ ಜೀವಾಳ- ವಿಟ್ಲ ದೇವಳ ಧರ್ಮ ಸಭೆಯಲ್ಲಿ ಸಾಽ ಮಾತಾನಂದಮಯೀ ಆಶೀರ್ವಚನ

PTR_17 MAY_2
Published on

ಸಂಸ್ಕಾರ ಸಂಸ್ಕೃತಿಯ ಜೀವಾಳವಾಗಿದ್ದು, ಸಂಸ್ಕಾರ ನೀಡುವ ಜವಾಬ್ದಾರಿ ಮಾತೆಯರಿಗಿದೆ. ಬಾಲ್ಯದಲ್ಲಿ ತಳಪಾಯ ಗಟ್ಟಿಗೊಳಿಸುವ ಕಾರ್ಯವಾಗಬೇಕಾಗಿದೆ. ಮಕ್ಕಳಲ್ಲಿ ದೇಶಾಭಿಮಾನ ತುಂಬುವ ಕಾರ್ಯವಾಗಬೇಕು. ಅಧರ್ಮ ಆದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸಮರ್ಥ ನಾಯಕತ್ವದ ಮೂಲಕ ಉತ್ತರ ನೀಡುವ ಕಾರ್ಯವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಽ ಮಾತಾನಂದಮಯೀ ಹೇಳಿದರ್‍ಫು.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ಘಟಕ ಸಾರಥ್ಯದಲ್ಲಿ ಅರ್ಧ ಏಕಾಹ ಭಜನೆ ಮತ್ತು ಸಾರ್ವಜನಿಕ ಶ್ರೀ ದುರ್ಗಾನಮಸ್ಕಾರ ಪೂಜೆಯ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.

ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು ಕಾರ್ಯಕ್ರಮ ಉದ್ಘಾಟಿಸಿದರು. ಹಿಂದು ಧಾರ್ಮಿಕ ಮುಖಂಡ ಕಲ್ಲುತೋಟ ರಾಧಾಕೃಷ್ಣ ಅಡ್ಯಂತಾಯ ಧಾರ್ಮಿಕ ಉಪನ್ಯಾಸ ನೀಡಿದರು. ಶ್ರೀ ದುರ್ಗಾ ಪೂಜಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಕೇಪು ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರಿನ ನ್ಯೂವಾನಿಕ್ ಇನ್ವೆಸ್ಟರ್ಸ್ ಪಾಯಿಂಟ್ ಹಾಗೂ ಶ್ರೀಕೃಷ್ಣ ಫಿಲಂ ಪ್ರೊಡಕ್ಷನ್ ವತಿಯಿಂದ ಎ.ವಿ.ಸೂರ್ಯಕಾಂತ್ ಮತ್ತು ಆಶಾ ಸೂರ್ಯಕಾಂತ್ ಪುತ್ತಿಲ ಪರಿವಾರಕ್ಕೆ ೮ ಲಕ್ಷ ರೂ. ಮೌಲ್ಯದ ಭಗವತ್ ಗೀತಾ ಪುಸ್ತಕ ಹಸ್ತಾಂತರಿಸಿದರು.

ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ, ವಿಟ್ಲ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಜಗನ್ನಾಥ ಸಾಲಿಯಾನ್, ಅಳಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಕಾನ, ಉದ್ಯಮಿಗಳಾದ ಸುರೇಶ್ ಬನಾರಿ, ತಾರಾನಾಥ ಬೋಳಿಗದ್ದೆ, ರಾಜೇಶ್ ತೋಡ್ಲ, ಪುತ್ತಿಲ ಸೇವಾ ಟ್ರಸ್ಟ್ ವಿಟ್ಲ ಘಟಕ ಅಧ್ಯಕ್ಷ ಮೋಹನ್ ಸೇರಾಜೆ ಉಪಸ್ಥಿತರಿದ್ದರು.

ಸುಖನ್ಯಾ ಸೇರಾಜೆ ಪ್ರಾರ್ಥಿಸಿದರು. ಸಮಿತಿ ಸಂಚಾಲಕ ರವಿಶಂಕರ್ ವಿಟ್ಲ ಸ್ವಾಗತಿಸಿದರು. ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಪ್ರಸ್ತಾವನೆಗೈದರು. ಕಾರ್ಯದರ್ಶಿ ಹರೀಶ್ ಪೂಜಾರಿ ಮರುವಾಳ ವಂದಿಸಿದರು. ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ಕೋಶಾಽಕಾರಿ ಶ್ರೀಕೃಷ್ಣ ವಿಟ್ಲ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net