

ಹುಬ್ಬಳ್ಳಿ: ನಗರದ ಮಂಟೂರ ರಸ್ತೆಯಲ್ಲಿರುವ ಭೋಜಗಾರ ಭೋವಿ ವಡ್ಡರ ಸಮಾಜದ ಭೋವಿ ವಡ್ಡರ ಕಾಲನಿಯಲ್ಲಿ ಹೊಸದಾಗಿ ನಿಮಿರ್ಸಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶುಕ್ರವಾರ ಅಮೃತ ವೇಳೆಯಲ್ಲಿ ದೇವಿಯ ನೂತನ ಶಿಲಾಮೂತಿರ್ಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಅರವಿಂದನಗರದ ಹುಲಿಗೆಮ್ಮಾದೇವಿ ದೇವಸ್ಥಾನದ ಸಂಸ್ಥಾಪಕರಾದ ಮಾತೋಶ್ರೀ ಹುಲಿಗೆಮ್ಮಾ ಪೋಸಾ ಅಮ್ಮನವರು, ನವವಿಧ ಸ್ನಾನಗಳು, ಮಹಾಭಿಷೇಕಗೈದು ಮೂತಿರ್ಯನ್ನು ಅಲಂಕರಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಶಶಿಕಾಂತ ದೇಸಾಯಿ ಭಟ್ಟರ ನೇತೃತ್ವದಲ್ಲಿ ವಿವಿಧ ಹೋಮ&ಹವನಗಳು, ದೇವಿಯವರಿಗೆ ಪ್ರಾಣ ಪ್ರತಿಷ್ಠಾಪನೆ ಹೋಮ ಪೂರ್ಣಾಹುತಿ ಕಾರ್ಯಕ್ರಮಗಳು ನಡೆದವು.
ನಂತರ ನಡೆದ ವೇದಿಕೆ ಕಾರ್ಯಕ್ರಮವನ್ನು ಮೇಯರ್ ವೀಣಾ ಬರದ್ವಾಡ ಅವರು ಉದ್ಘಾಟಿಸಿ ಮಾತನಾಡಿ, ತಾಯಿ ದುರ್ಗಾದೇವಿ ಸನ್ನಿಧಿಗೆ ಆಗಮಿಸಿ ಬಹಳ ಧನ್ಯತಾಭಾವ ಅನುಭವಿಸಿದ್ದೇನೆ. ಹಿರಿಯರು ನಮ್ಮ ಸಂಸತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯ ಮಾಡಬೇಕು ಎಂದು ಹೇಳಿದರು.
ನ್ಯಾಯವಾದಿ ಹೇಮಂತ ಕರ್ಜಗಿ ಮಾತನಾಡಿ, ಮಾತೋಶ್ರೀ ಹುಲಿಗೆಮ್ಮಾ ಪೋಸಾ ಅಮ್ಮನವರ ಸಾಧನೆ ಅದ್ಭುತವಾಗಿದೆ. ಕಳೆದ 40 ವರ್ಷಗಳಿಂದ ಪಾದರೆ ಧರಿಸದೇ ಬರಿಗಾಲಲ್ಲಿ ಓಡಾಡಿಕೊಂಡು ಬಡಜನರ ಸೇವೆ ಮಾಡುತ್ತ ಬಂದಿದ್ದಾರೆ. ಅನೇಕ ದೇಗುಲಗಳಲ್ಲಿ ಶ್ರೀ ದೇವಿಯವರ ಮೂತಿರ್ಗಳನ್ನು ಪ್ರತಿಷ್ಠಾಪಿಸಿದ್ದಾರೆ ಎಂದರು.
ಅತಿಥಿಯಾಗಿದ್ದ ಬಸವರಾಜ ಬನ್ನಿಕೊಪ್ಪ ಮಾತನಾಡಿ, ಇಲ್ಲಿನ ಬಡಜನರು ಭಕ್ತಿಯಿಂದ ದೊಡ್ಡ ಗುಡಿಯನ್ನು ಕಟ್ಟಿದ್ದು ನೋಡಿ ಬಹಳ ಸಂತೋಷವಾಯಿತು. ತಾವು ದಣ ಗೋವಾದಲ್ಲಿ ನೆಲೆಸಿದ್ದು, ಸುಮಾರು 5500 ಜನ ವಾಸವಾಗಿದ್ದೇವೆ. ಅಲ್ಲಿ ಕನ್ನಡ ಭವನವನ್ನು ನಿಮಿರ್ಸಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಸಾನ್ನಿಧ್ಯ ವಹಿಸಿದ್ದ ಮಾತೋಶ್ರೀ ಹುಲಿಗೆಮ್ಮಾ ಪೋಸಾ ಅಮ್ಮನವರು ಆರ್ಶೀವಚನ ನೀಡಿದರು. ಅತಿಥಿಗಳು, ದಾನಿಗಳು, ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು.
ಸಮಾಜದ ಅಧ್ಯ ಬಾಬು ಭೋಜಗಾರ, ಯುವಕ ಮಂಡಳದ ಅಧ್ಯ ಲಕ್ಷ್ಮಣ ಭೋಜಗಾರ, ದುರ್ಗಪ್ಪ ಬಿಜವಾಡ, ಲಕ್ಷ್ಮಿಬಾಯಿ ಬಿಜವಾಡ, ಶಶಿಕಾಂತ ಬಿಜವಾಡ, ಪ್ರಕಾಶ ಅರಗಂಜಿ, ಸಮಾಜದ ಹಿರಿಯರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಶುಕ್ರವಾರ ಸಂಜೆ ದೇವಸ್ಥಾನಕ್ಕೆ ಆಗಮಿಸಿದ ಮೂರುಸಾವಿರ ಮಠದ ಜಗದ್ಗುರು ಶ್ರೀಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ದೇವಿಯ ದರ್ಶನ ಪಡೆದರು. ಆಶೀರ್ವಚನ ನೀಡಿದ ಅವರು, ಮಾತೋಶ್ರೀ ಅಮ್ಮನವರ ಸೇವೆ ಕೊಂಡಾಡಿದರು. ಅವರಿಂದ ಇನ್ನಷ್ಟು ಸೇವಾ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.