ಲೈಾಲ ರಾಘವೇಂದ್ರ ಮಠದಲ್ಲಿ ದೃಢಕಲಶ

New Project (9)
Published on

ಬೆಳ್ತಂಗಡಿ: ಕಾರ್ಕಳದ ಭಾರತಿ ರಮಣ ಆಚಾರ್ಯರ ಮಾರ್ಗದರ್ಶನದಲ್ಲಿ ಶ್ರೀ ರಾಘವೇಂದ್ರ ಮಠದ ಮುಖ್ಯ ಅರ್ಚಕ ರಾಘವೇಂದ್ರ ಬಾಂಗಿಣ್ಣಾಯ ಪೌರೋಹಿತ್ಯದಲ್ಲಿ ಮೂಲ ರಾಮ ಸಹಿತ ಶ್ರೀ ರಾಘವೇಂದ್ರ ಗುರುಗಳ ಮತ್ತು ಆಂಜನೇಯ ಸ್ವಾಮಿಗಳ ಬಂದಾವನದ ದೃಢಕಲಶ ಲೈಾಲ ಶ್ರೀ ರಾಘವೇಂದ್ರ ಮಠದಲ್ಲಿ ನಡೆಯಿತು.

ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೆರಾಜೆ, ಬ್ರಹ್ಮಕಲಶೋತ್ಸವ ಅಧ್ಯಕ್ಷ ರಕ್ಷಿತ್ ಶಿವರಾಮ್, ಪ್ರಧಾನ ಕಾರ್ಯದರ್ಶಿ ವಸಂತ ಸುವರ್ಣ, ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಕೋಶಾಧಿಕಾರಿ ಶ್ರವಣ್‌ರಾಜ್, ಟ್ರಸ್ಟಿಗಳಾದ ಸೋಮೇಗೌಡ, ಪ್ರೊ.ಕೃಷ್ಣಪ್ಪ ಪೂಜಾರಿ, ಸುಜಿತಾ ವಿ.ಬಂಗೇರ, ಸುಶೀಲಾ ಹೆಗಡೆ, ಗೌರವ ಸಲಹೆಗಾರರಾದ ಡಾ.ಬಿ.ಎ.ಕುಮಾರ ಹೆಗಡೆ, ಮಂಜುನಾಥ ರೈ, ಹಿರಿಯರಾದ ವಿಟ್ಠಲ್ ಶೆಟ್ಟಿ, ನಿವೃತ್ತ ಎಸ್.ಪಿ.ಮಿತ್ರ ಹೇರಾಜೆ, ಕೃಷ್ಣ ಶೆಟ್ಟಿ, ರಾಜೇಶ್ ಶೆಟ್ಟಿ, ನಾರಾಯಣ ಮಚ್ಚಿನ, ಲತಾ ಶಿವರಾಮ್, ವಾರಿಜಾ ಸುವರ್ಣ, ಸೌಮ್ಯಾ, ಶಾಂಭವಿ ಬಂಗೇರ, ಜಯಾನಂದ, ಜಯಪ್ರಕಾಶ್ ಶೆಟ್ಟಿ ಬಂಗಾರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net