

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆ ಗ್ರಾಮದ ಶೇಡಿಕೊಡ್ಲುವಿನಲ್ಲಿ ನೂತನವಾಗಿ ನಿರ್ಮಿಸಿರುವ ದುರ್ಗಾ ಗಾರ್ಡನ್ ಉದ್ಘಾಟನಾ ಸಮಾರಂಭವು ನವೆಂಬರ್ 21ನೇ ಗುರುವಾರ ಸಂಜೆ 4.30ಕ್ಕೆ ನಡೆಯಲಿದೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು ಇದರ ಅಧ್ಯಕ್ಷ ಅಪ್ಪಣ್ಣ ಹೆಗ್ಡೆ ಉದ್ಘಾಟಿಸಲಿದ್ದಾರೆ. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ.
ನಿವೃತ್ತ ಪ್ರಾಂಶುಪಾಲ ಎಂ.ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ ಪ್ರಸ್ತಾವನೆಗೈಯುವರು. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಮಂತ್ರಿ ಕೆ.ಜಯಪ್ರಕಾಶ ಹೆಗ್ಡೆ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಡಾ.ಎಚ್.ಎಸ್.ಶೆಟ್ಟಿ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ, ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನ ಅಧ್ಯಕ್ಷ ಆನಂದ ಕುಂದರ್, ಉಡುಪಿ ಜಿಲ್ಲಾ ಸಭಾಂಗಣಗಳ ಒಕ್ಕೂಟ ಗೌರವಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ತೋಟಗಾರಿಕಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಚ್.ಜಯಶೀಲ ಶೆಟ್ಟಿ, ಬ್ರಹ್ಮಾವರ ಘಟಕ ಪಟ್ಲ ಫೌಂಡೇಶನ್ ಅಧ್ಯಕ್ಷ ಕೆ.ಬಾಲಕೃಷ್ಣ ಹೆಗ್ಡೆ, ಹೆಗ್ಗುಂಜೆ ಗ್ರಾಪಂ ಅಧ್ಯಕ್ಷ ರಾಮಕೃಷ್ಣ ಮತ್ತಿತರರು ಉಪಸ್ಥಿತರಿರುವರು.
ಸಂಜೆ 06.30ರಿಂದ ಪಟ್ಲ ಫೌಂಡೇಶನ್ ಬ್ರಹ್ಮಾವರ ಘಟಕದ ದ್ವಿತೀಯ ವಾರ್ಷಿಕೋತ್ಸವ ಪ್ರಯುಕ್ತ ಪಾವಂಜೆ ಮೇಳದ ಯಕ್ಷಗಾನ ಬಯಲಾಟ ಭಾರತ ವರ್ಷಿಣಿ ಜರುಗಲಿರುವುದು ಹಾಗೂ ರಾತ್ರಿ ಸಹಭೋಜನ ವ್ಯವಸ್ಥೆ ಇರುತ್ತದೆ ಎಂದು ಎಚ್.ವಿಠ್ಠಲ ಶೆಟ್ಟಿ ಶೇಡಿಕೊಡ್ಲು ಮಂದಾರ್ತಿ ತಿಳಿಸಿದ್ದಾರೆ.
ಧಾರ್ಮಿಕ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನಿಹದಲ್ಲೇ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಇಲ್ಲಿ 2008ರಲ್ಲಿ 350ಜನ ಕುಳಿತುಕೊಳ್ಳುವ ದುರ್ಗಾ ಸಭಾಂಗಣ ಆರಂಭಿಸಿ 250 ಜನ ಕುಳಿತುಕೊಳ್ಳಲು ವ್ಯವಸ್ಥೆ ಇರುವ ಸುಸಜ್ಜಿತ ಕಟ್ಟಡ ಸಕಲ ವ್ಯವಸ್ಥೆಗಳೊಂದಿಗೆ ಆರಂಭವಾಗಿತ್ತು. ಗುಣಮಟ್ಟದ ಸಸ್ಯಾಹಾರಿ ಹಾಗೂ ಮಾಂಸಹಾರಿ ಭೋಜನ ಊಟವನ್ನು ರಿಯಾಯಿತಿ ದರದಲ್ಲಿ ನೀಡಿದ್ದರಿಂದ ಎಲ್ಲ ವರ್ಗದ ಜನರು ಮದುವೆ, ಬೀಗರ ಔತಣ, ಮೆಹಂದಿ, ಹಳದಿ, ಹುಟ್ಟುಹಬ್ಬ, ಮುಂತಾದ ಕಾರ್ಯಕ್ರಮಗಳನ್ನು ತಮ್ಮ ಆದಾಯದ ಇತಿಮಿತಿಯೊಳಗೆ ನೆರವೇರಿಸಿದ್ದಾರೆ. ಈ ಯಶಸ್ಸು ಪ್ರೇರಣೆ ನೀಡಿದ್ದರಿಂದ 2017ರ ಜ.17ರಂದು ನೂತನ ಹವಾನಿಯಂತ್ರಿತ 700 ಜನ ಕುಳಿತುಕೊಳ್ಳಲು ಬೇಕಾದ ದುರ್ಗಾ ಸನ್ನಿಧಿ ಹಾಲ್ ನಿರ್ಮಿಸಿ ಅದರಲ್ಲಿ ಕೂಡ ಎಲ್ಲ ವರ್ಗದ ಜನರು ಸಮಾರಂಭಗಳನ್ನು ಮಾಡಿ ಪ್ರೋತ್ಸಾಹಿಸಿ ಸಹಕರಿಸಿರುತ್ತಾರೆ.
ಇಂದಿನ ಅವಶ್ಯಕತೆ ಗಮನಿಸಿ ಮುಕ್ತ ಸಭಾಂಗಣ ದುರ್ಗಾ ಗಾರ್ಡನ್ ನಿರ್ಮಿಸಿ ಸುಮಾರು 2000ಕ್ಕೂ ಅಧಿಕ ಜನ ಕುಳಿತುಕೊಳ್ಳಲು ಹಾಗೂ ಭೋಜನದ ಮುಕ್ತ ವ್ಯವಸ್ಥೆ ನಿರ್ಮಿಸಲಾಗಿದೆ. ಇದಕ್ಕೆ ಪ್ರತ್ಯೇಕ ಪ್ರವೇಶ ದ್ವಾರ ಹಾಗೂ ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ. ವಿದ್ಯಾಸಂಸ್ಥೆಗಳು, ಸಹಕಾರಿ ಸಂಘಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳು, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಾರ್ಯಕ್ರಮಗಳನ್ನು ಬಾಡಿಗೆ ರಹಿತವಾಗಿ ನೀಡುತ್ತಾ ಬಂದಿದೆ. ಅಲ್ಲದೆ ಯಕ್ಷಗಾನ, ಯಕ್ಷನಕ್ಷತ್ರ ಟ್ರಸ್ಟ್ ಕಿರಾಡಿ ಮುಂತಾದ ಸಂಘಟನೆಗಳಿಗೆ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಾಡಿಗೆ ರಹಿತವಾಗಿ ನೀಡಿರುತ್ತಾರೆ. ಪ್ರತಿ ಭಾನುವಾರ ಕರಾಟೆ, ಭರತನಾಟ್ಯ, ಡ್ಯಾನ್ಸ್ ಮುಂತಾದ ತರಬೇತಿ ಕಾರ್ಯಕ್ರಮಗಳಿಗೂ ಉಚಿತವಾಗಿ ಸಭಾಂಗಣವನ್ನು ನೀಡಿರುತ್ತೇವೆ. ನಮ್ಮ ಈ ಉದ್ಯಮವನ್ನು ಪ್ರೋತ್ಸಾಹಿಸಿ ಸಹಕರಿಸಿ ಎಂದು ಎಚ್.ಕೃಷ್ಣ ಶೆಟ್ಟಿ ಮತ್ತು ಎಚ್.ವಿಠ್ಠಲ ಶೆಟ್ಟಿ ಶೇಡಿಕೊಡ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.