

ಕೊಕ್ಕರ್ಣೆ: ಯುವಜನತೆ ಉದ್ಯೋಗಕ್ಕೆಂದು ವಲಸೆ ಹೋಗುತ್ತಾರೆ. ನಮ್ಮಲ್ಲೇ ಇರುವ ಅವಕಾಶ ಬಳಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ದುರ್ಗಾ ಗಾರ್ಡನ್ ನಿರ್ಮಿಸಿರುವುದರ ಮೂಲಕ ಪರಿಸರದ ಜನತೆಗೆ ಉದ್ಯೋಗ, ಸರಕಾರಕ್ಕೆ ತೆರಿಗೆ ಪಾವತಿ ಮುಂತಾದ ರೀತಿಯಲ್ಲಿ ಗ್ರಾಮೀಣ ಭಾಗದ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಡಾ.ಎಚ್.ಎಸ್.ಶೆಟ್ಟಿ ಹೇಳಿದರು.
ಗುರುವಾರ ನಡೆದ ಹೆಗ್ಗುಂಜೆಯ ದುರ್ಗಾ ಗಾರ್ಡನ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆನುವಂಶಿಕ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ, ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನ ಅಧ್ಯಕ್ಷ ಆನಂದ ಕುಂದರ್, ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ತೋಟಗಾರಿಕಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಚ್.ಜಯಶೀಲ ಶೆಟ್ಟಿ, ಬ್ರಹ್ಮಾವರ ಘಟಕ ಪಟ್ಲ ಫೌಂಡೇಶನ್ ಅಧ್ಯಕ್ಷ ಕೆ.ಬಾಲಕೃಷ್ಣ ಹೆಗ್ಡೆ, ಹೆಗ್ಗುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಕೃಷ್ಣ, ಎಚ್.ಕೃಷ್ಣ ಶೆಟ್ಟಿ ಶೇಡಿಕೊಡ್ಲು, ಹೆಗ್ಗುಂಜೆ ಹೊಸಮನೆ ಕುಟುಂಬಸ್ಥರು, ಶೇಡಿಕೊಡ್ಲು ವಿಠ್ಠಲ ಶೆಟ್ಟಿ ಅಭಿಮಾನಿ ಬಳಗ ಉಪಸ್ಥಿತರಿದ್ದರು. ಹರೀಶ್ ಹೆಬ್ಬಾರ್ ಪ್ರಾರ್ಥಿಸಿದರು. ಎಚ್.ವಿಠ್ಠಲ ಶೆಟ್ಟಿ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಎಂ.ಬಾಲಕೃಷ್ಣ ಶೆಟ್ಟಿ ಪ್ರಸ್ತಾವನೆಗೈದರು. ನಿವೃತ್ತ ಶಿಕ್ಷಕ ಸುದರ್ಶನ ಶೆಟ್ಟಿ ವಂದಿಸಿದರು. ಶಿಕ್ಷಕ ಶಶಿಧರ ಶೆಟ್ಟಿ ನಂಚಾರು ನಿರೂಪಿಸಿದರು.