6 ನೇ ದಿನದ ದುರ್ಗಾ ದೌಡ್‌ ಸ್ವಾಗತಿಸಿದ ಸುನೀಲ ಹೆಗಡೆ

Haliyal-Durga-Davud.
Published on

ಹಳಿಯಾಳ: ಧರ್ಮದರ ಪರವಾಗಿದ್ದರೇ ಧರ್ಮ ನಮ್ಮನ್ನು ಉಳಿಸುತ್ತದೇ ಅದೇ ರೀತಿ ಮಕ್ಕಳಿಗೆ ಬಾಲ್ಯದಿಂದಲೇ ಧಾರ್ಮಿಕ ಸಂಸ್ಕಾರ ನೀಡುವಂತೆ

ಮಾಜಿ ಶಾಸಕ‌ ಸುನೀಲ್ ಹೆಗಡೆ ಕರೆ ನೀಡಿದರು.

ನವರಾತ್ರಿ ಉತ್ಸವದ ಅಂಗವಾಗಿ ಪಟ್ಟಣದಲ್ಲಿ ಶಿವಪ್ರತಿಷ್ಠಾನ ಹಿಂದೂಸ್ತಾನ, ದುರ್ಗಾದೌಡ ಸಮಿತಿಯಿಂದ ದುರ್ಗಾದೌಡ ಧಾರ್ಮಿಕ ನಡಿಗೆ ಕಾರ್ಯಕ್ರಮ ನಡೆಯುತ್ತಿದೆ. 6 ನೇ ದಿನ‌ವಾದ ಶುಕ್ರವಾರ ಮೆರವಣಿಗೆಯು ಸುಭಾಷ ರಸ್ತೆಗೆ ಆಗಮಿಸಿದಾಗ ಸುನೀಲ ಹೆಗಡೆ ತಮ್ಮ ಪತ್ನಿ ಸುವರ್ಣಾ ಹೆಗಡೆ ಹಾಗೂ ಕುಟುಂಬದವರೊಂದಿಗೆ ಸ್ವಾಗತಿಸಿದರು. ಸ್ವತಃ ತಾವು ಕೂಡ ಭಗವಾಧಾರಿ ತ್ರಿಶೂಲವನ್ನು ಹಿಡಿದು ದೌಡನಲ್ಲಿ ಸಾಗಿದರು. ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ತಾಯಿ ದುರ್ಗಾಮಾತೆ ವಿವಿಧ ರೂಪಗಳಲ್ಲಿ ಅವತರಿಸಿ ಮಹಾನ್ ದುಷ್ಟರನ್ನು ಸಂಹಾರ ಮಾಡಿದ್ದಾಳೆ. ಅದೇ ರೀತಿ ನಾವು ಸಹಿತ ಪ್ರಸ್ತುತ ದೇಶದಲ್ಲಿ ದುಷ್ಟ ಪಿಡುಗುಗಳ ಸಂಹಾರ ಮಾಡಬೇಕಿದೆ ಎಂದು ಕರೆ ನೀಡಿದರು.

ಸಧ್ಯ ಹಳಿಯಾಳ ತಾಲೂಕಿನ 28 ಕ್ಕೂ ಹೆಚ್ಚು ಗ್ರಾಮಗಳು ಹಾಗೂ ದಾಂಡೇಲಿ ನಗರದಲ್ಲಿಯೂ ಕೂಡ ದುರ್ಗಾದೌಡ ವಿಜೃಂಭಣೆಯಿಂದ ನಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಿವಪ್ರತಿಷ್ಠಾನ, ದುರ್ಗಾದೌಡ ಸಮೀತಿಯವರು ಹಾಗೂ ಹಿಂದೂ ಮುಖಂಡರು ಇದ್ದರು.

ಶುಕ್ರವಾರ ದುರ್ಗಾದೌಡ ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಮುಕ್ತಾಯವಾಗಿದ್ದು ಶನಿವಾರ ಇದೇ ದೇವಸ್ಥಾನದಿಂದ ಬೆಳಗ್ಗೆ 5.45  ಪುನಃ 7 ನೇ ದಿನದ ದೌಡ ಆರಂಭಿಸಿ ಅರ್ಬನ್ ಬ್ಯಾಂಕ್ ವೃತ್ತ, ಗಣಪತಿಗಲ್ಲಿ, ಮೇದಾರಗಲ್ಲಿ, ತಾನಾಜಿಗಲ್ಲಿ, ಗುತ್ತಿಗೇರಿಗಲ್ಲಿ, ಗೌಳಿಗಲ್ಲಿಯಲ್ಲಿ ಸಂಚರಿಸಲಿದೆ ಎಂದು ಸಮೀತಿಯವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net