ದುರ್ಗಾದೇವಿ ಪಲ್ಲಕ್ಕಿ ಉತ್ಸವ

Durga Devi Palanki Festival
ಕಲಾದಗಿಯಲ್ಲಿ ಶ್ರೀ ದುರ್ಗಾದೇವಿ ಮೆರವಣಿಗೆ ಸಂಭ್ರಮದಿಂದ ಜರುಗಿತು.
Published on

ಕಲಾದಗಿ: ಗ್ರಾಮದ ಶಿವಶರಣ ಸಮಗಾರ ಹರಳಯ್ಯ ಸಮಾಜದ ವತಿಯಿಂದ ಜೂ.4ರ ವರೆಗೆ ನಡೆಯುವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಭಾನುವಾರ ಶ್ರೀದೇವಿ ಪಲ್ಲಕ್ಕಿ ಮಹೋತ್ಸವದೊಂದಿಗೆ ಚಾಲನೆ ದೊರೆಯಿತು.

ಬೆಳಗ್ಗೆ ಶ್ರೀದೇವಿ ದೇವಾಲಯದಿಂದ ಆರಂಭವಾದ ದುರ್ಗಾದೇವಿ ಬೆಳ್ಳಿ ಕವಚ ಮೆರವಣಿಗೆ ಬಾಗವಾನ ಗಲ್ಲಿ, ಬಸವಣ್ಣ ದೇವರಗುಡಿ, ಹೊಸೂರು ಚೌಕ, ಗಡ್ಡಿ ಓಣಿ, ಹೆಣ್ಣು ಮಕ್ಕಳ ಶಾಲೆ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಹರಣಶಿಕಾರಿ ಕಾಲನಿ, ಕೊಬ್ರಿ ಕ್ರಾಸ್ ಮಾರ್ಗವಾಗಿ ಸಾಗಿ ದೇವಾಲಯದ ಬಳಿ ಸಂಪನ್ನಗೊಂಡಿತು.

ಮೆರವಣಿಗೆಯಲ್ಲಿ ವಿವಿಧ ವಾದನಗಳ ಸದ್ದು ಮೆರವಣಿಗೆ ಮೆರುಗು ಹೆಚ್ಚಿಸಿತು. ಮಹಿಳೆಯರು ಕುಂಭ ಹೊತ್ತು ಹೆಜ್ಜೆ ಹಾಕಿದರು. ಮಧ್ಯಾಹ್ನ ಮಹಾಪ್ರಸಾದ ನಡೆದು ಭಕ್ತರು ಪ್ರಸಾದ ಸ್ವೀಕರಿಸಿದರು.

ಮೆರವಣಿಗೆಯಲ್ಲಿ ಸಮಾಜದ ಮುಖಂಡರಾದ ಬಸವಂತಪ್ಪ ಆಸಂಗಿ, ಗುರುಲಿಂಗಪ್ಪ ಗೋವಿಂದಪ್ಪ ಕಲ್ಲೊಳ್ಳಿ, ಕೃಷ್ಣಾ ಮಲ್ಲೇಶಪ್ಪ ದೇವಮಾನೆ, ಸದಾಶಿವ ಸಣ್ಣಕ್ಕಿ, ಯಲ್ಲಪ್ಪ ಕುಂದರಗಿ, ಡಾ.ಪರುಶುರಾಮ ದೇವಮಾನೆ, ಮಹಾಲಿಂಗ ಮಡ್ಡೆನ್ನವರ, ಷಣ್ಮುಖಪ್ಪ ವಗ್ಗೆನ್ನವರ, ಸುರೇಶ ಆಸಂಗಿ, ಹನುಮಂತ ಕುಂದರಗಿ, ದುರಗಪ್ಪ ದೇವಮಾನೆ, ಮನೋಹರ ದೇವಮಾನೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net