ರಟ್ಟಿಹಳ್ಳಿಯಲ್ಲಿ ದುರ್ಗಾದೇವಿ, ಮಾರಿಕಾಂಬಾ ದೇವಿ ಜಾತ್ರೋತ್ಸವ ಏ. 23ರಿಂದ

Durgadevi jatrotsava rattihalli
Published on

ರಟ್ಟಿಹಳ್ಳಿ: ಪಟ್ಟಣದ ಐತಿಹಾಸಿಕ ಶ್ರೀ ದುರ್ಗಾದೇವಿ ಮತ್ತು ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು 9 ವರ್ಷಗಳ ಬಳಿಕ ಏ. 23 ಮತ್ತು 24ರಂದು ಅದ್ದೂರಿಯಾಗಿ ಆಚರಿಸಲಾಗುವುದು. ಶರಭವತಾರಿ ಶ್ರೀ ವೀರಭದ್ರೇಶ್ವರ ರಥೋತ್ಸವವನ್ನು ಏ. 19ರಂದು ಆಚರಿಸಲಾಗುವುದು ಎಂದು ಟ್ರಸ್ಟ್ ಕಮಿಟಿ ಅಧ್ಯಕ್ಷ ಪಿ.ಡಿ. ಬಸನಗೌಡ್ರ ಹೇಳಿದರು.

ಪಟ್ಟಣದ ಮಾರಿಕಾಂಬಾ ದೇವಿ ಪಾದಗಟ್ಟಿಯ ಬಳಿ ಏರ್ಪಡಿಸಿದ್ದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ 5 ವರ್ಷಕ್ಕೊಮ್ಮೆ ದೇವಿ ಜಾತ್ರಾ ಮಹೋತ್ಸವ ಆಚರಣೆ ಮಾಡಲಾಗುತ್ತಿತು. ಈ ಪದ್ಧತಿ ಅನ್ವಯ 2020ರಲ್ಲಿ ಜಾತ್ರಾ ಮಹೋತ್ಸವ ನಿಗದಿಯಾಗಿತ್ತು ಆದರೆ, ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದಂತೆ ಜಾತ್ರೆಯನ್ನು ರದ್ದು ಮಾಡಲಾಗಿತ್ತು. ಈ ನಿಯಮದ ಅನ್ವಯ 2024ರಲ್ಲಿ 9 ವರ್ಷಗಳ ಬಳಿಕ ಜಾತ್ರ ಮಹೋತ್ಸವ ಆಯೋಜಿಸಲಾಗುತ್ತಿದೆ ಎಂದರು.

ಏ. 21ರಿಂದ 26 ರವರೆಗೆ ವಿವಿಧ ಧಾರ್ವಿುಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೆ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ತಿಳಿಸಲಾಗುವುದು ಎಂದರು.

ಜಾತ್ರಾ ಮಹೋತ್ಸವದ ಅಧ್ಯಕ್ಷ ಶ್ರೀನಿವಾಸ ಭೈರಪ್ಪನವರ ಮಾತನಾಡಿ, ಸರ್ವ ಸಮಾಜದ ಬಾಂಧವರು ಮತ್ತು ಹಿರಿಯರ ಮಾರ್ಗದರ್ಶನದಂತೆ ಜಾತ್ರಾ ಮಹೋತ್ಸವದ ದಿನಾಂಕ ನಿಗದಿ ಮಾಡಲಾಗಿದೆ. ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಶಂಭಣ್ಣ ಗೂಳಪ್ಪನವರ, ರವೀಂದ್ರ ಮುದಿಯಪ್ಪನವರ, ವೀರನಗೌಡ ಪ್ಯಾಟಿಗೌಡ್ರ, ರವಿ ಹರವಿಟ್ಟರ್, ವಸಂತ ದ್ಯಾವಕ್ಕಳವರ, ಮಧ್ವರಾವ ಕುಲ್ಕರ್ಣಿ, ಹನುಮಂತಗೌಡ ಪಾಟೀಲ, ರಾಮಣ್ಣ ವಾಲ್ಮೀಕಿ, ಮನೋಜ ಗೋಣೆಪ್ಪನವರ, ಬಸವರಾಜ ಆಡಿನವರ, ಗದಗೆಪ್ಪ ಸಾವಕ್ಕನವರ, ಪ್ರಶಾಂತ ದ್ಯಾವಕ್ಕಳವರ, ಗಿರೀಶ ಬಣಕಾರ, ಗೋಪಾಲ ಮಡಿವಾಳರ, ರಮೇಶ ಅಡ್ಮನಿ, ಬೀರಪ್ಪ ಸುಣಗಾರ, ಸಿ.ಎಫ್. ಜಾಡರ್, ರಾಮಣ್ಣ ಉಪ್ಪಾರ, ಮಂಜಪ್ಪ ಹರಿಜನ, ವೀರಪ್ಪ ಮಾಯಚಾರಿ, ನಾಗರಾಜ ಸಾಳುಂಕೆ, ರಾಘವೇಂದ್ರ ಹರವಿಶೆಟ್ಟರ್, ವೀರನಗೌಡ್ರ ಮಕರಿ, ಸಿದ್ದು ಹಲಗೇರಿ, ಸಂದೀಪ ಪಾಟೀಲ, ರಾಜುಗೌಡ ಪಾಟೀಲ, ಮಹೇಶ ಮಳಗೊಂಡರ, ರಮೇಶ ಭೀಮಪ್ಪನವರ, ಮಾರುತಿ ವಾಲ್ಮೀಕಿ, ರಾಜು ನಾಯಕ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net