ಆಲ್ದೂರಿನ ದುರ್ಗಾದೇವಿ ಜಲಸ್ತಂಭನ

ald-2a
Published on

ಆಲ್ದೂರು: ಮಹಾಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದು ದುರ್ಗಾ ದೇವಿಯನ್ನು ವಿಜೃಂಭಣೆಯಿಂದ ನಡೆಸಿ ಬೀರಂಜಿ ಹಳ್ಳದಲ್ಲಿ ದುರ್ಗಾದೇವಿ ವಿಸರ್ಜಿಸಲಾಯಿತು.

ಸಂಜೆ 4 ಘಂಟೆಗೆ ಪಟ್ಟಣದ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ದುರ್ಗಾ ದೇವಿ ಮೂರ್ತಿಯನ್ನು ಅಲಂಕರಿಸಿದ ಟ್ರಾಕ್ಟರ್‌ನಲ್ಲಿ ಇರಿಸಿ ಪಟ್ಟಣದ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹುಲಿವೇಷ, ನಾಸಿಕ್ ಡೋಲು, ಗೊಂಬೆಮೇಳ, ಭಜನೆ ಕುಣಿತ, ಬೃಹತ್ ಗಾತ್ರದ ರಾಮನ ಮೂರ್ತಿ ಆಕರ್ಷಣೀಯವಾಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಕ್ಕಳು,ಮಹಿಳೆಯರು ಕುಣಿದು ಸಂಭ್ರಮಿಸಿದರು. ಭಗವಾಧ್ವಜಗಳು ರಾರಾಜಿಸಿದವು. ದುರ್ಗಾ ದೇವಿಗೆ ಭಕ್ತರು ಹಣ್ಣು ಕಾಯಿ ಸಮರ್ಪಿಸಿದರು.

ಮೊದಲ ಬಾರಿಗೆ ಮಹಾಗಣಪತಿ ದೇವಸ್ಥಾನದಲ್ಲಿ ಹಿಂದು ದುರ್ಗಾ ದೇವಿಯನ್ನು ಪ್ರತಿಷ್ಠಾಪಿಸಿದ್ದು , ಹೆಚ್ಚಿನ ಸಂಖ್ಯೆಯಲ್ಲಿ ,ಮಹಿಳೆಯರು,ಭಕ್ತರು ಭಾಗವಹಿಸಿದ್ದರು ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ರಸ್ತೆಯುದ್ದಕ್ಕೂ ಘೋಷಣೆಗಳು ಮೊಳಗಿದರೆ,ಮೆರವಣಿಗೆಯಲ್ಲಿ ಭಗವಾಧ್ವಜಗಳು ರಾರಾಜಿಸಿದವು. ದುರ್ಗಾ ದೇವಿಗೆ ಭಕ್ತರು ಹಣ್ಣು ಕಾಯಿ ಸಮರ್ಪಿಸಿದರು.

ಸಮಿತಿ ಅಧ್ಯಕ್ಷ ಅನೂಪ್, ತುಡಕೂರು ಮಂಜು, ಕಾರ್ಯದರ್ಶಿ ಪುನೀತ್, ಉಪಾಧ್ಯಕ್ಷರಾದ ರಾಜು ಕೆ.ಎಲ್. ನಾಗೇಶ್, ಖಜಾಂಚಿ ಅಕ್ಷಯ್ ನಿರ್ದೇಶಕರಾದ ಭವ್ಯ. ಮಿಥುನ್, ಭಾನುಪ್ರಕಾಶ್, ದರ್ಶನ್, ಆತ್ಮಿಕ್, ಪ್ರಜ್ವಲ್, ಸುಚಿನ್, ಸಂಕೇತ್, ಶಶಿಧರ್ , ಮೂರ್ತಿ, ಚೇತನ್, ರುದ್ರೇಗೌಡ, ಭಾನು, ದಿನೇಶ್,ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಸುರೇಶ್, ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ರಾಜೀವ್, ಸಮಿತಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net