ನಾಡಿದ್ದು ದುರ್ಗಾದೇವಿ ಜಾತ್ರೆ ಆರಂಭ

23Muragod2
Published on

ಮುರಗೋಡ: ಸಮೀಪದ ಹಾರುಗೊಪ್ಪ ಗ್ರಾಮದಲ್ಲಿ ಮೇ 26ರಿಂದ 30ರ ವರೆಗೆ ದುರ್ಗಾದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಲಿದೆ.

26ರಂದು ಬೆಳಗ್ಗೆ ದೇವಿ ಅಭಿಷೇಕ, ಮಧ್ಯಾಹ್ನ ಅನ್ನಪ್ರಸಾದ, ಸಂಜೆ ಭಜನೆ ಜರುಗಲಿವೆ. 27ರಂದು ಬೆಳಗ್ಗೆ 8ಕ್ಕೆ ದುರ್ಗಾದೇವಿ ಕಿಚ್ಚ ಹಾಯುವುದು, ನಂತರ ದೇವಿಯ ಹೊನ್ನಾಟ, ನಂತರ ಅನ್ನಪ್ರಸಾದ, ರಾತ್ರಿ ದೈವದ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.

28ರಂದು ಬೆಳಗ್ಗೆ ಗ್ರಾಮಸ್ಥರಿಂದ ಉಡಿ ತುಂಬುವುದು, ರಾತ್ರಿ ಸಂಗ್ಯಾ-ಬಾಳ್ಯಾ ಸಾಮಾಜಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. 29ರಂದು ಬೆಳಗ್ಗೆ ಉಡಿ ತುಂಬುವ ಕಾರ್ಯಕ್ರಮ, 10ಗಂಟೆಗೆ ಟ್ರ್ಯಾಕ್ಟರ್ ರಿವರ್ಸ್ ಓಡಿಸುವ ಸ್ಪರ್ಧೆ, ರಾತ್ರಿ 10ಗಂಟೆಗೆ ಚೌಡಕಿ ಪದಗಳು ಜರುಗುವವು. 30ರಂದು ಬೆಳಗ್ಗೆ ಉಡಿ ತುಂಬುವುದು, 10 ಗಂಟೆಗೆ ಬೈಕ್ ಸ್ಲೋ ಓಡಿಸುವ ಸ್ಪರ್ಧೆ ಹಾಗೂ ಸಂಜೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನ, ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net