

ಲಕ್ಷ್ಮೇಶ್ವರ: ಪಟ್ಟಣದಲ್ಲಿ ದಸರಾ ಹಬ್ಬದ ನಿಮಿತ್ತ ಈ ಭಾಗದಲ್ಲಿಯೇ ನೂತನ ಪ್ರಯೋಗವಾಗಿರುವ ದುರ್ಗಾದೌಡ್ ಕಾರ್ಯಕ್ರಮವು 10 ದಿನಗಳ ಕಾಲ ನೆರವೇರಲಿದೆ. ಮೊದಲ ದಿನ ಸೋಮವಾರ ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶ್ರೀ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯರು ಚಾಲನೆ ನೀಡಿದರು.
ನೂರಾರು ಕಾರ್ಯಕರ್ತರ ಜೊತೆ ಮೊದಲ ದಿನದ ಧಾರ್ಮಿಕ ನಡಿಗೆಯು ಬೆಳಗ್ಗೆ 5.30ಕ್ಕೆ ದ್ಯಾಮವ್ವ ದೇವಿ ದೇವಸ್ಥಾನದಿಂದ ಹೊರಟು ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದ ರೂವಾರಿ ಗುರುನಾಥ ದಾನಪ್ಪನವರ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಯುವಕರಲ್ಲಿ ಧಾರ್ಮಿಕ ಮೌಲ್ಯ ಹೆಚ್ಚಿಸುವ, ಧರ್ಮ ಜಾಗೃತಿ, ಧಾರ್ಮಿಕ ಕಲ್ಪನೆಗಳು ಉಳಿಯಬೇಕು ಎನ್ನುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ದಸರಾ ಉತ್ಸವ ಸಮಿತಿ ಸಂಚಾಲಕ ಬಸವರಾಜ ಅರಳಿ ಮಾತನಾಡಿ, ಇದೊಂದು ನಮ್ಮ ಭಾಗದಲ್ಲಿ ವಿಶಿಷ್ಟ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಲ್ಲಿ ಧರ್ಮ ಜಾಗೃತಿ ಎಲ್ಲರಲ್ಲಿ ಮೂಡಿ ಬರುತ್ತದೆ ಎನ್ನುವದರಲ್ಲಿ ಸಂಶಯವಿಲ್ಲ ಎಂದರು. ವರ್ತಕ ಬಸವೇಶ ಮಹಾಂತಶೆಟ್ಟರ, ಮಹೇಶ ಹೊಗೆಸೊಪ್ಪಿನ್, ದುರ್ಗಾದೌಡ ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪೂಜಾರ, ತಿಪ್ಪಣ್ಣ ಸಂಶಿ, ರವಿ ಲಿಂಗಶೆಟ್ಟಿ, ದೇವಪ್ಪ ಗಡೇದ, ರಾಜು ಗುಡಗೇರಿ, ಪ್ರಶಾಂತ ಪೋತದಾರ, ಉಮೇಶ ಕಟ್ಟಿಮನಿ, ಮಲ್ಲಪ್ಪ ಅಂಕಲಿ, ಪ್ರಕಾಶ ಮೇವುಂಡಿ, ಗುರಪ್ಪ ಮುಳಗುಂದ ಎಂ.ಎಂ.ಕಂಡೊಜಿ, ರಾಜಶೇಖರ ಶಿಗ್ಲಿಮಠ, ಶಿವರಾಮ ಪಾಟೀಲಕುಲಕರ್ಣಿ, ಶಿವಣ್ಣ ಕಟಗಿ, ಶಿವಣ್ಣ ಗಿಡಿಬಿಡಿ ಇತರರು ಇದ್ದರು.