ರಟ್ಟಿಹಳ್ಳಿಯಲ್ಲಿ ಗಮನಸೆಳೆದ ದುರ್ಗಾದೌಡ್

RTL DURGA DOUD
Published on

ರಟ್ಟಿಹಳ್ಳಿ: ದಸರಾ ಮಹೋತ್ಸವ ನಿಮಿತ್ತ ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್ ಹಾಗು ಬಜರಂಗದಳ ವತಿಯಿಂದ ಹಮ್ಮಿಕೊಂಡಿದ್ದ ದುರ್ಗಾದೌಡ್ ಕಾರ್ಯಕ್ರಮ ಗಮನ ಸೆಳೆಯಿತು.

ಪಟ್ಟಣದ ಕೋಟೆ ಓಣಿಯ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಲಾಯಿತು. ಮಕ್ಕಳು ನವರಾತ್ರಿ ದೇವಿಯರ ಉಡುಗೆ ತೊಡುಗೆ ತೊಟ್ಟು ಸಂಭ್ರಮಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ದುರ್ಗಾದೌಡ್, ಶಿವಾಜಿನಗರದ ಬನ್ನಿಮಹಾಂಕಾಳಿ ದೇವಸ್ಥಾನ ತಲುಪಿ ಸಂಪನ್ನಗೊಂಡಿತು. 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮಾತೃ ಶಕ್ತಿ ಮತ್ತು ದುರ್ಗಾವಾಹಿನಿ ಆಯಾಮದ ವತಿಯಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಿತು.

ವಿಹಿಂಪ ಜಿಲ್ಲಾ ಉಪಾಧ್ಯಕ್ಷ ನಾಗರಾಜ ನರಸಾಪುರ, ಜಿಲ್ಲಾ ಕಾರ್ಯದರ್ಶಿ ಅನಿಲ ಹಲವಾಗಿಲು, ಸಂಯೋಜಕ ಕಿಟ್ಟಿ ಪಾಟೀಲ, ರವಿ ಮುದ್ದಣ್ಣನವರ, ಮೃತ್ಯುಂಜಯ ಬೆಣ್ಣಿ, ನವೀನ ಮಾದರ, ಆಕಾಶ ಪಾಟೀಲ, ಸರೋಜಾ ಹುರಕಡ್ಲಿ, ಸುರಭಿ ನಾಡಗೇರ ಮತ್ತು ಹಿಂದು ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net