ಕಮಲ ಪುಷ್ಪ ಸಹಿತ ದುರ್ಗಾ-ಚಂಡಿಕಾಯಾಗ

h22-chandikayaga
Published on

ಹುಬ್ಬಳ್ಳಿ: ದುರ್ಗಾಷ್ಟಮಿ ದಿನ ನಿಮಿತ್ತ ಇಲ್ಲಿನ ವಿಜಯನಗರದ ವಿಜಯಾಂಜನೇಯ ವೇದ ಸಂಸ್ಕೃತ ವಿದ್ಯಾಲಯ ಮತ್ತು ವಿಜಯನಗರ ಹೌಸಿಂಗ್ ಸೊಸೈಟಿಯಲ್ಲಿ ಆಗಮೋಕ್ತ ಲಕ್ಷ್ಮೀಹೃದಯ ಮಂತ್ರ ಪೂರ್ವಕ 108 ಕಮಲಪುಷ್ಪ ಮಧು ಸಹಿತ ದುರ್ಗಾ-ಚಂಡಿಕಾಯಾಗವನ್ನು ಶನಿವಾರ ಏರ್ಪಡಿಸಲಾಗಿತ್ತು.

ಯಾಗದ ಅಧ್ಯಕ್ಷತೆಯನ್ನು ವೇದಪೀಠದ ಅಧ್ಯಕ್ಷ ಡಾ. ಕಂಠಪಲ್ಲೀ ಸಮೀರಣಾಚಾರ್ಯ ಅವರು ವಹಿಸಿದ್ದರು. ಕಮಲಪುಷ್ಪ ಮಧು ಸಹಿತ ದುರ್ಗಾಯಾಗದ ಉದ್ದೇಶ ಸನಾತನ ಭಾರತೀಯ ಧರ್ಮ ರಕ್ಷಣೆ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಅಭ್ಯುದಯ, ಯೋಧರು, ರೈತರ ಕಲ್ಯಾಣ ಮತ್ತು ದೇಶವಾಸಿಗಳ ಸುಖ-ಶಾಂತಿಗಾಗಿ ಯಾಗ ನಡೆಸಿದರು.

ಯಾಗದ ಯಾಜಮಾನ್ಯವನ್ನು ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ದಂಪತಿ ವಹಿಸಿದ್ದರು. ಹೌಸಿಂಗ್ ಸೊಸೈಟಿ ಚೇರ್ಮನ್ ವಿ.ಸಿ. ದಿನೇಶ, ಪದಾಧಿಕಾರಿಗಳಾದ ಆನಂದ ಪಾಟೀಲ, ಡಾ. ಹಿರೇಗೌಡರ, ವಿನೋದ ದೇಶಪಾಂಡೆ, ಸಂಧ್ಯಾ ದೀಕ್ಷಿತ, ಮಧುಕರ, ಸುಬ್ಬಣ್ಣಾಚಾರ್ಯ, ಉಮೇಶ ಭಟ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net