ದುರ್ಗಾದೇವಿ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮ, ಪುಷ್ಪಾಧಿವಾಸದಲ್ಲಿರಿಸಿ ಶಿಲಾಮೂರ್ತಿಗೆ ಪೂಜೆ

IMG_20231123_154221_535.jpg
Published on

ಹುಬ್ಬಳ್ಳಿ: ಇಲ್ಲಿಯ ಮಂಟೂರ ರಸ್ತೆಯಲ್ಲಿರುವ ಭೋಜಗಾರ ಭೋವಿ ವಡ್ಡರ ಸಮಾಜದ ಭೋವಿ ವಡ್ಡರ ಕಾಲನಿಯಲ್ಲಿ (ಸುಣ್ಣದ ಭಟ್ಟಿ) ನೂತನವಾಗಿ ನಿರ್ಮಿಸಿದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ದೇವಿಯವರ ನೂತನ ಶಿಲಾಮೂರ್ತಿಯ ಪ್ರತಿಷ್ಠಾಪನೆ ಅಂಗವಾಗಿ ಮೂರನೇ ದಿನ ಬುಧವಾರ ಶಿಲಾಮೂರ್ತಿಯನ್ನು ಪುಷ್ಪಾಧಿವಾಸದಲ್ಲಿರಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಮಾತೋಶ್ರೀ ಹುಲಿಗೆಮ್ಮಾ ಪೋಸಾ ಅಮ್ಮನವರು ಶೋಡೋಪಚಾರಗಳಿಂದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ದೇವಿಯವರಿಗೆ ಮುತ್ತೈದೆಯರು ಅರಿಶಿಣ-ಕುಂಕುಮ, ಅಕ್ಷತೆಯನ್ನೇರಿಸಿ ಆರತಿ ಮಾಡಿದರು.

ಶ್ರೀ ಗಣೇಶ ಮತ್ತು ಶ್ರೀ ಹುಲಿಗೆಮ್ಮದೇವಿ ಭಜನಾ ಮಂಡಳಿಯ ಶೋಭಾ ತಾಂಬೆ, ಪುಷ್ಪಾ ಏಕಬೋಟೆ, ಯಶೋಧಾ ಸಪಾರೆ, ಜಯಶ್ರೀ ಮಳೆಕರ, ಉಮಾ ಕಾಂಬಳೆ ಮುಂತಾದವರು ಲಕ್ಷ್ಮೀ ಶೋಭಾನವನ್ನು ಹೇಳಿ ದೇವಿಯ ಭಜನೆ ಹಾಡುಗಳನ್ನು ಹೇಳಿದರು.

ಶ್ರೀ ದುರ್ಗಾದೇವಿ ಯುವಕ ಮಂಡಳದ ಅಧ್ಯಕ್ಷ ಲಕ್ಷ್ಮಣ ವಡ್ಡರ, ದಶರಥ ವಡ್ಡರ, ನರಸಿಂಹ ಭೋಜಗಾರ, ರಿತೇಶ್ ಭೋಜಗಾರ, ಮಹಾದೇವ ಭೋಜಗಾರ, ಮಂಜುನಾಥ ಭೋಜಗಾರ, ಕುಮಾರ ಭೋಜಗಾರ, ಶಾಂತಯ್ಯ ಲಕ್ಷ್ಮೇಶ್ವರಮಠ, ಸದಾನಂದ ಭೋಜಗಾರ, ಪರಶುರಾಮ ಭೋಜಗಾರ, ಉಳವಯ್ಯ ಲಕ್ಷ್ಮೇಶ್ವರಮಠ, ಮಂಜುನಾಥ ವೈ. ಭೋಜಗಾರ, ಲೋಕೇಶ್ ಭೋಜಗಾರ, ಮಂಜುನಾಥ ಪಿ. ಭೋಜಗಾರ, ಗಿರಿಯಪ್ಪ ಬಳ್ಳಾರಿ, ರಘು ಹರಿಜನ ಮುಂತಾದವರು ಉಪಸ್ಥಿತರಿದ್ದರು.

ನ. 23ರಂದು ನೂತನ ಶಿಲಾಮೂರ್ತಿಯನ್ನು ಶಯ್ಯಾಧಿವಾಸದಲ್ಲಿರಿಸಿ ಸಾಯಂಕಾಲ ಪೂಜೆಯನ್ನು ನೆರವೇರಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net