

ಧಾರವಾಡ: ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರತಿನಿಽಸುವ ಧಾರವಾಡ ಜಿಲ್ಲೆಯಲ್ಲಿ ನಕಲಿ ಕಟ್ಟಡ ಕಾರ್ಮಿಕರ ಹಾವಳಿ ಹೆಚ್ಚಾಗಿದೆ. ಬೋಗಸ್ ದಾಖಲೆ ನೀಡಿ ಕಾರ್ಮಿಕರ ಕಾರ್ಡ್ ಪಡೆದಿದ್ದ ೫,೬೯೩ ಜನರು ಪತ್ತೆಯಾಗಿರುವುದು ಇಲಾಖೆ ಅಽಕಾರಿಗಳ ಕಾರ್ಯಕ್ಷಮತೆ ಹೇಗಿದೆ ಎಂಬುದಕ್ಕೆ ನಿದರ್ಶನ.
ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕಾರ್ಮಿಕ ಕಾರ್ಡ್ ಆರಂಭಿಸಿತ್ತು. ಆದರೆ, ಕಾರ್ಮಿಕರಲ್ಲದವರೂ ನಕಲಿ ದಾಖಲೆ ಸಲ್ಲಿಸಿ ಅಕ್ರಮವಾಗಿ ಸರ್ಕಾರಿ ಸೌಲಭ್ಯ ಪಡೆದಿರುವುದು ಇಲಾಖೆಯ ತನಿಖೆಯಿಂದ ಬೆಳಕಿಗೆ ಬಂದಿದೆ.
ಜಿಲ್ಲಾ ಕಾರ್ಮಿಕ ಇಲಾಖೆಯ ಅಂಕಿ ಸಂಖ್ಯೆ ಪ್ರಕಾರ ೧,೨೮,೨೫೫ ನೋಂದಾಯಿತ ಕಾರ್ಮಿಕರು ಕಾರ್ಡ್ ಪಡೆದಿದ್ದಾರೆ. ಆದರೆ, ಈ ಪೈಕಿ ೫,೬೯೩ ಜನರು ನಕಲಿ ದಾಖಲೆ ನೀಡಿ ಕಾರ್ಡ್ ಪಡೆದಿರುವುದು ಪತ್ತೆಯÁಗಿದೆ. ಇಂಥವರ ವಿರುದ್ಧ ಕಾಯÁðಚರಣೆ ನಡೆಸುತ್ತಿರುವ ಜಿಲ್ಲಾ ಕಾರ್ಮಿಕ ಇಲಾಖೆ ಅಕ್ರಮ ಕಾರ್ಡ್ಗಳನ್ನು ವಶಕ್ಕೆ ಪಡೆದು ರದ್ದುಗೊಳಿಸಿದೆ.
ಕಾರ್ಮಿಕ ಕಾರ್ಡ್ ಯೋಜನೆ ಆರಂಭಗೊAಡಾಗ ನೋಂದಣಿ ಮತ್ತು ನವೀಕರಣ ಶುಲ್ಕ ನಿಗದಿಪಡಿಸಲಾಗಿತ್ತು. ಆದರೆ, ಕೋವಿಡ್ ನಂತರ ರದ್ದು ಮÁಡಲಾಗಿದೆ. ಈ ಮಧ್ಯೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಕಾರ್ಮಿಕರಲ್ಲದವರಿಗೆ ಕಾರ್ಡ್ ಕೊಡಿಸುವುದು ಸುಲಭವಾಗಿದೆ. ಕಟ್ಟಡ ಮತ್ತು ಇತರೆ ನಿಮÁðಣ ಕಾರ್ಮಿಕರಲ್ಲದವರಿಂದ ಹಣ ಪಡೆದು, ನಕಲಿ ದಾಖಲೆ ಸೃಷ್ಟಿಸಿ ಕಾರ್ಮಿಕ ಕಲ್ಯಾಣ ಮಂಡಳಿ ನೀಡುವ ಗುರುತಿನ ಚೀಟಿ ಕೊಡಿಸಿ ಸೌಲಭ್ಯಗಳ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಪತ್ತೆಯಾಗಿದೆ.
ಮಧ್ಯವರ್ತಿಗಳ ಹಾವಳಿ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಕಟ್ಟಡ ಮತ್ತು ಇತರೆ ನಿಮÁðಣ ಕಾರ್ಮಿಕರ ಕಲ್ಯಾಣ ಮಂಡಳಿ, ಅನರ್ಹ ಕಾರ್ಡ್ಗಳನ್ನು ರದ್ದುಗೊಳಿಸಲು ಜನವರಿಯಲ್ಲಿ ವಿಶೇಷ ಅಭಿಯÁನ ಆರಂಭಿಸಿತ್ತು. ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕರನ್ನು ಒಳಗೊಂಡ ತಂಡಗಳು ಜಿಲ್ಲೆಯÁದ್ಯಂತ ಪರಿಶೀಲನೆ ಕಾರ್ಯ ನಡೆಸುತ್ತಿದೆ. ಈ ಅಭಿಯಾನದಿಂದ ಇದುವರೆಗೆ ೫,೬೯೩ ನಕಲಿ ಕಾರ್ಡ್ಗಳು ಪತ್ತೆಯÁಗಿವೆ.
ಬೋಗಸ್ ಕಾರ್ಡ್ ಮÁಡಿಸಿಕೊಂಡವರು ಸ್ವಯಂಪ್ರೇರಿತರಾಗಿ ಗುರುತಿನ ಚೀಟಿ ಹಿಂದಿರುಗಿಸಿದರೆ ಒಪ್ಪಿಗೆ ಪತ್ರ ಪಡೆದು ಬಿಡಲಾಗುವುದು. ನೋಂದಣಿ ದಾಖಲೆಗಳನ್ನು ಆನ್‌ಲೈನ್ ಮತ್ತು ವೈಯಕ್ತಿಕ ಕಡತದಲ್ಲಿ ರದ್ದುಗೊಳಿಸಲಾಗುವುದು. ಆದಾಗ್ಯೂ ಹಿಂತಿರುಗಿಸದಿದ್ದರೆ ಇಲಾಖೆಯಿಂದ ನಡೆಯುವ ಪರಿಶೀಲನೆ ವೇಳೆ ಸಿಕ್ಕಿಬಿದ್ದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಅಽಕಾರಿಗಳು ಎಚ್ಚರಿಸಿದ್ದಾರೆ.
ಕಾರ್ಮಿಕರ ಕಾರ್ಡ್ ಪಡೆದಿರುವ ನಕಲಿ ಫಲಾನುಭವಿಗಳ ಪತ್ತೆ ಕಾರ್ಯ ನಿರಂತರವಾಗಿ ನಡೆಯಲಿದೆ. ಈಗಾಗಲೇ ನಕಲಿ ಕಾರ್ಮಿಕರು ಅನುಭವಿಸಿರುವ ಸೌಲಭ್ಯಗಳನ್ನು ಹಿಂಪಡೆಯಲು ಕ್ರಮ ವಹಿಸಲಾಗಿದೆ ಎನ್ನುತ್ತಾರೆ ಕಾರ್ಮಿಕ ಇಲಾಖೆ ಅಽಕಾರಿಗಳು.
ಸರ್ಕಾರಕ್ಕೆ ವಂಚನೆ
ಸರ್ಕಾರ ನೋಂದಾಯಿತ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆ, ಉಚಿತ ಬಸ್ ಪಾಸ್ ಹಾಗೂ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಕಿಟ್, ವಿದ್ಯಾರ್ಥಿ ವೇತನದಂಥ ಸೌಲಭ್ಯ ಕಲ್ಪಿಸುತ್ತಿದೆ. ಕರೊನಾ ಸಮಯದಲ್ಲಿ ಕಾರ್ಮಿಕರಿಗೆ ೫ ಸಾವಿರ ರೂ. ನಗದು, ಆಹಾರದ ಕಿಟ್ ನೀಡಲಾಗಿದೆ. ಆದರೆ, ನಕಲಿ ಕಾರ್ಮಿಕರು ಈ ಎಲ್ಲ ಸೌಲಭ್ಯಗಳನ್ನು ಪಡೆದು ಸರ್ಕಾರವನ್ನು ವಂಚಿಸಿದ್ದಾರೆ.