ನಕಲಿ ದಾಖಲೆ ಮೂಲಕ 19 ಲಕ್ಷ ರೂ. ಸಾಲ!

LOAN NEWS
Published on

ಈಶ್ವರಮಂಗಲ: ಬೇರೊಬ್ಬರಿಗೆ ಸೇರಿದ ಜಾಗ ಮತ್ತು ಮನೆಯನ್ನು ತೋರಿಸಿ, ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ರಾಷ್ಟ್ರೀಕೃತ ಬ್ಯಾಂಕ್‌ನಿಂದ 19 ಲಕ್ಷ ರೂ. ಸಾಲ ಪಡೆದು ವಂಚಿಸಿರುವ ಮೂವರ ವಿರುದ್ಧ ಬ್ಯಾಂಕ್‌ನವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ಸಮೀಪದ ಶಾಂತಿನಗರದ ನಿವಾಸಿ ಅಬ್ದುಲ್ ನಝೀರ್(39), ಆತನ ಪತ್ನಿ ಫೌಝಿಯಾ(38) ಮತ್ತು ಜಾಮೀನುದಾರ ಮಹಮ್ಮದ್ ರಫೀಕ್(44) ಆರೋಪಿಗಳು.

2019ರ ನವೆಂಬರ್‌ನಲ್ಲಿ ಇವರು ರಿಝ್ವನ್ ಖಾನ್ ಎಂಬುವರು ನಿರ್ಮಿಸಿದ್ದ ಮನೆಯನ್ನು ತಮ್ಮದೆಂದು ತೋರಿಸಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಬ್ಯಾಂಕ್‌ಗೆ ಹಾಜರುಪಡಿಸಿ 19 ಲಕ್ಷ ರೂ.ಸಾಲ ಪಡೆದಿದ್ದರು. ಆದರೆ ಆರೋಪಿಗಳು ಪಡೆದ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಿದಾಗ ಆರೋಪಿಗಳು ನೀಡಿರುವ ದಾಖಲೆ ನಕಲಿ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net