ದುಂಡಯ್ಯ ಹಿರೇಮಠ ಲಿಂಗೈಕ್ಯ

11 vikram 10
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜನ ಮಠದ ಪೀಠಾಧಿಪತಿ ವೇ. ಮೂ. ದುಂಡಯ್ಯ ಹಿರೇಮಠ (96) ಭಾನುವಾರ ರಾತ್ರಿ ಲಿಂಗೈಕ್ಯರಾದರು.
ಅವರಿಗೆ ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
ಮೌನಯೋಗಿ ಮಹಾಂತ ಶಿವಯೋಗಿ ಅವರ ಪೂರ್ವಾಶ್ರಮದ ಸಹೋದರ ದುಂಡಯ್ಯ ಹಿರೇಮಠ (ಸ್ವಾಮೀಜಿ), ಮಹಾಂತ ಶಿವಯೋಗಿಗಳು ಲಿಂಗೈಕ್ಯರಾದ ನಂತರ ಮಳೆಪ್ಪಜ್ಜನ ಮಠದ ಉತ್ತರಾಧಿಕಾರಿ ಆಗಿದ್ದರು.
ದುಂಡಯ್ಯ ಸ್ವಾಮೀಜಿ ನಿಧನಕ್ಕೆ ಉಪ್ಪಿನ ಬೆಟಗೇರಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮೀಜಿ, ಶಿರಕೋಳದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯರು, ಅಮ್ಮಿನಬಾವಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯರು, ಇನಾಮಹೊಂಗಲದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಕಲ್ಯಾಣದ ಪಂಡಿತರಾಧ್ಯರು, ಹೊಸೂರು, ನಯಾನಗರ ಸೇರಿ ನಾಡಿನ ಅನೇಕ ಗುರು -ವಿರಕ್ತರು ಶೋಕ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net