ಬೆನಕನಕೊಪ್ಪ ಗ್ರಾಪಂಗೆ ದುಂಡವ್ವ ಅಧ್ಯಕ್ಷೆ

Dandapura
Published on

ನರಗುಂದ: ತಾಲೂಕಿನ ಬೆನಕನಕೊಪ್ಪ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ನೂತನ ಅಧ್ಯಕ್ಷೆಯಾಗಿ ದುಂಡವ್ವ ಫಕೀರಪ್ಪ ಮರ್ಚಕ್ಕನವರ, ಉಪಾಧ್ಯಕ್ಷೆಯಾಗಿ ಪಾರ್ವತೆವ್ವ ಫಕೀರಪ್ಪ ಮಾದರ ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ಚುನಾವಣೆ ಅಧಿಕಾರಿ ನವೀನಕುಮಾರ ಪಾಟೀಲ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷೆ , ಬೆನಕನಕೊಪ್ಪ ಗ್ರಾಮದ ಸರ್ವ ಸದಸ್ಯರು ನನ್ನ ಮೇಲೆ ಅಪಾರ ನಂಬಿಕೆ ವಿಶ್ವಾಸವನ್ನಿಟ್ಟು ಗ್ರಾಪಂ ಅಧ್ಯಕ್ಷೆಯನ್ನಾಗಿ ಅವಿರೋಧ ಆಯ್ಕೆ ಮಾಡಿದ್ದಾರೆ. ಸದಸ್ಯರ ಸಹಮತಕ್ಕೆ ಯಾವುದೇ ಕಪ್ಪುಚುಕ್ಕೆ ಬಾರದಂತೆ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ಎಂ. ಹರನಟ್ಟಿ, ಸದಸ್ಯರಾದ ಪತ್ರೆಪ್ಪ ಭೂಮಣ್ಣವರ, ಶಿವಯೋಗಿ ಭೂಮಣ್ಣವರ, ಶಿವಲೀಲಾ ಭೂಮಣ್ಣವರ, ಕಾಶವ್ವ ತಳವಾರ, ಶಾಂತವ್ವ ಕೋವಿ, ಈರಪ್ಪ ನಾಯ್ಕರ, ನಾಗನಗೌಡ ಪೊಲೀಸ್ ಪಾಟೀಲ, ಶಿದ್ದಪ್ಪ ಗುರುಪಾದಪ್ಪ ಅಂಗಡಿ, ಪ್ರಕಾಶ ಭೂಮಣ್ಣವರ, ಮಹೇಶ್ವರಯ್ಯ ಸುರೇಬಾನ, ಯಲ್ಲಪ್ಪ ಸಂಗ್ರೇಶಿ, ಬಸವರಾಜ ಭೂಮಣ್ಣವರ, ಚನ್ನಪ್ಪಗೌಡ ಪಾಟೀಲ, ಪಡಿಯಪ್ಪಗೌಡ ಹಾಲಗೌಡ್ರ, ಗಂಗಪ್ಪ ಮರ್ಚಕ್ಕನವರ, ಗಿರಿಯಪ್ಪ ಗುಡಿಸಲಮನಿ, ಮಲ್ಲಪ್ಪ ಕೊಣ್ಣೂರ, ಮುತ್ತಪ್ಪ ಮೇಟಿ, ಬಾಳಪ್ಪ ಗಡ್ಡಿ, ಚವಡಪ್ಪ ತಳವಾರ, ಮಂಜು ಮರ್ಚಕ್ಕನವರ, ಗದಿಗೆಪ್ಪ ಮರ್ಚಕ್ಕನವರ, ಆನಂದ ಭೂಮಣ್ಣವರ, ಯಲ್ಲಪ್ಪ ತಳವಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net