

ಶಿಗ್ಲಿ: ಗ್ರಾಪಂ ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಸದಸ್ಯೆ ದುಂಡವ್ವ ಫಕೀರಪ್ಪ ಹಾದಿಮನಿ, ಉಪಾಧ್ಯಕ್ಷೆಯಾಗಿ ಶೈಲಾ ರಘುನಾಥ ಜನಿವಾರದ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಎಂ.ಎಂ. ಹವಳದ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಪಿಡಿಒ ಎಸ್.ಎಸ್.ಹುನಗುಂದ, ಕಾರ್ಯದರ್ಶಿ ಆರ್.ಎಸ್. ಕೊರಕನವರ ಇದ್ದರು.
ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಿಸಿದರು. ಗ್ರಾಪಂ ಸದಸ್ಯ ಯಲ್ಲಪ್ಪ ತಳವಾರ, ಶಿವಣ್ಣ ಕುರಿ, ಜಿ.ಪಂ. ಮಾಜಿ ಸದಸ್ಯ ಎಸ್.ಪಿ. ಬಳಿಗಾರ. ತಾಪಂ ಮಾಜಿ ಸದಸ್ಯ ರಾಜರತ್ನ ಹುಲಗೂರ, ಕೃಷ್ಣ ಬಿದರಳ್ಳಿ, ಶಿವಾನಂದ ಮೂಲಿಮನಿ, ಅಶೋಕ ಶಿರಹಟ್ಟಿ, ರಂಜನ್ ಪಾಟೀಲ, ಬಸವರಾಜ ಹಂಜಿ, ರಾಮಣ್ಣ ಲಮಾಣಿ (ಶಿಗ್ಲಿ), ಎನ್.ಎನ್. ನೆಗಳೂರ, ರಮೇಶ ಬಾರ್ಕಿ ಇತರರಿದ್ದರು.