ಮಂಗಳೂರು: ಒಂದೆಡೆ ಸ್ವಚ್ಛ ಭಾರತ ಹೆಸರಿನಲ್ಲಿ ಸಂಘ ಸಂಸ್ಥೆಗಳು, ಆಸಕ್ತ ಸ್ವಯಂ ಸೇವಕರು ಸಮಾಜದ ಕಸವನ್ನೆತ್ತುವ ಮಾದರಿ ಕೆಲಸ ಮಾಡಿದರೆ, ಇನ್ನೊಂದೆಡೆ ಸಿಕ್ಕಿದಲ್ಲಿ ತ್ಯಾಜ್ಯ ಚೆಲ್ಲುತ್ತಾ ಪರಿಸರವನ್ನು ಕುಲಗೆಡಿಸುವ ಕಿಡಿಗೇಡಿಗಳಿಗೇನೂ ಕಡಿಮೆಯಿಲ್ಲ.
ಮಂಗಳೂರಿನ ಉಳ್ಳಾಲದಲ್ಲಿ ಕಂಪನಿಯೊಂದರ ಲಾರಿ ತ್ಯಾಜ್ಯವನ್ನು ತಂದು ಕಡಲಿಗೆ ಸುರಿಯುತ್ತಾ ಮಾಲಿನ್ಯಕ್ಕೆ ತನ್ನ ಕೊಡುಗೆ ನೀಡುತ್ತಿರುವ ವಿಡಿಯೋವೊಂದು ಈಗ ಸಿಕ್ಕಿದೆ.
ವ್ಯಕ್ತಿಯೊಬ್ಬರು ಈ ವಿಡಿಯೋ ಶೂಟ್ ಮಾಡಿದ್ದು, ಉಳ್ಳಾಲ ಕೋಟೆಪುರ ಸಮೀಪದ ಸಮುದ್ರಕ್ಕೆ ಪ್ಲಾಸ್ಟಿಕ್, ಥರ್ಮೊಕೋಲ್‌ನಂತಹ ಕಸವನ್ನು ತಂದು ಚೆಲ್ಲುತ್ತಿರುವುದನ್ನು ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ ಸ್ಪಷ್ಟವಾಗಿ ಲಾರಿಯ ನಂಬರ್ ಕೂಡಾ ಸೆರೆಹಿಡಿಯಲಾಗಿದೆ.