ದುಮ್ಮಳ್ಳಿಯಲ್ಲಿ ಪತ್ನಿ ಹತ್ಯೆ ಮಾಡಿ ವ್ಯಕ್ತಿ ಪರಾರಿ

5 smg shobha 1
Published on

ಶಿವಮೊಗ್ಗ: ತಾಲೂಕಿನ ದುಮ್ಮಳ್ಳಿಯಲ್ಲಿ ಶನಿವಾರ ಬೆಳಗ್ಗೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ದುಮ್ಮಳ್ಳಿಯ ಶೋಭಾ(50) ಕೊಲೆಯಾದ ಮಹಿಳೆ. ಪ್ರಕಾಶ್ ಮತ್ತು ಶೋಭಾ 20 ವರ್ಷಗಳಿಂದ ಅಕ್ಕಪಕ್ಕದ ಮನೆಗಳಲ್ಲಿ ಬೇರೆ ಬೇರೆ ವಾಸವಿದ್ದರು. ಗ್ರಾಮದಲ್ಲೇ ಹಾಲಿನ ಅಂಗಡಿ ನಡೆಸುತ್ತಿದ್ದ ಶೋಭಾ ಅವರು ಮಗ ಮಧು ಜತೆ ವಾಸವಾಗಿದ್ದು, ನಾಲ್ಕೈದು ತಿಂಗಳ ಹಿಂದೆ ಮಧು ಅಪಘಾತದಲ್ಲಿ ಮೃತಪಟ್ಟಿದ್ದರು.

ಶನಿವಾರ ಬೆಳಗ್ಗೆ ಪ್ರಕಾಶ್ ಮತ್ತು ಶೋಭಾ ನಡುವೆ ಜಗಳ ನಡೆದಿತ್ತು. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪ್ರಕಾಶ್ ಪತ್ನಿಗೆ ಶೋಬಾಗೆ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಶೋಭಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತುಂಗಾನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net