

ಶಿಗ್ಗಾಂವಿ: ದನಗಳಿಗೆ ನೀರು ಕುಡಿಯುವ ಹೋದ ಯುವಕನೊಬ್ಬ ನೀರಿನಲ್ಲಿ ಮುಳಗಿ ಮೃತಪಟ್ಟ ಘಟನೆ ತಾಲೂಕಿನ ಉತ್ತಿನಹಳ್ಳಿಯಲ್ಲಿ ಬುಧವಾರ ನಡೆದಿದೆ.
ಬಸವರಾಜ ಸಂಜೀವ ಮಲ್ಲೂರ (20) ಮೃತ ಯುವಕ.
ಈತ ದನಗಳಿಗೆ ನೀರು ಕುಡಿಸಲು ಎಂದು ದುಮ್ಮಗಟ್ಟಿ ಕೆರೆಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.