

ಹೊಸನಗರ: ತಾಲೂಕಿನ ಪ್ರತಿಷ್ಠಿತ ತುಂಗಾ ಅಡಕೆ ಮಾರಾಟ ಸೌಹಾರ್ದ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ನೂತನ ಅಧ್ಯಕ್ಷರಾಗಿ ದುಮ್ಮ ವಿನಯ ಕುಮಾರ್ ಅವಿರೋಧ ಆಯ್ಕೆ ಗೊಂಡರೆ, ಉಪಾಧ್ಯಕ್ಷರಾಗಿ ಮಾಲತೇಶ ಗೌಡ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಹೊಸಮನೆ ಎಚ್.ವಿ.ಜಯದೇವಪ್ಪ, ಹೊಳೇನಕೊಪ್ಪ ಎಚ್.ಎಸ್.ದಿನೇಶ್, ಎಚ್ ನವೀನ ಕುಮಾರ ಹೆದ್ಲಿ, ಎಸ್.ಎಸ್.ಸುಧೀರಕುಮಾರ್ ಸುಳುಗೋಡು, ಜಿ.ಎಸ್.ರವಿ ಗುಬ್ಬಿಗ, ಎಚ್.ಟಿ.ನಾಗೇಶ್ ಹೆಮ್ಮಕ್ಕಿ, ಮಹೇಶ ನಾಗರಕೊಡಿಗೆ, ಎಚ್.ಎಂ.ಬಶೀರ ಅಹಮದ್ ಕಮ್ಮಚ್ಚಿ, ಕೆ.ಎಸ್.ಶಿವಪ್ಪ ಕಾಳಿಕಾಪುರ, ನಾನ್ಯಾ ನಾಯ್ಕ ಮಂಡೇನಕೊಪ್ಪ, ಎಸ್.ಕೆ.ಲೇಖನಮೂರ್ತಿ ಸಾವಂತೂರು, ವಿನಾಯಕ ಸಿ.ಚಕ್ಕಾರು, ವೀರಮ್ಮ ಹೊಸಮನೆ, ಹೇಮಾ ಹೊಸಮನೆ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ವಿನಯಕುಮಾರ ದುಮ್ಮ ಮಾತನಾಡಿ, ಐದು ವರ್ಷದ ಹಿಂದೆ ಶೂನ್ಯ ಬಂಡವಾಳದಿಂದ ಆರಂಭಗೊಂಡ ತುಂಗಾ ಅಡಕೆ ಮಾರಾಟ ಸೌಹಾರ್ದ ಸಹಕಾರಿ ಸಂಘ ಇಂದು ಉತ್ತಮ ಪ್ರಗತಿ ಸಾಧಿಸಿದೆ. 215 ಇದ್ದ ಸದಸ್ಯರ ಸಂಖ್ಯೆ 1,113ಕ್ಕೇರಿದೆ. ಈಗಾಗಲೇ 12 ಕೋಟಿ ರೂ.ಗೂ ಹೆಚ್ಚು ಸಾಲಸೌಲಭ್ಯ ಒದಗಿಸಲಾಗಿದ್ದು 5.66 ಕೋಟಿ ರೂ. ಠೇವಣಿ ಸಂಗ್ರಹ ಮಾಡಲಾಗಿದೆ. ಉತ್ತಮ ಧಾರಣೆ ಮತ್ತು ವ್ಯವಹಾರದ ಮೂಲಕ ಮಲೆನಾಡಿನ ಪ್ರತಿಷ್ಠಿತ ಸೌಹಾರ್ದ ಸಹಕಾರಿಯಾಗಿ ಹೊರ ಹೊಮ್ಮಿದೆ. ಇದಕ್ಕೆ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡರ ಸಹಕಾರ ಮುಖ್ಯ ಕಾರಣ ಎಂದರು.
ಈ ವೇಳೆ ನೂತನ ಅಧ್ಯಕ್ಷ ಉಪಾಧ್ಯಕ್ಷ, ನಿರ್ದೇಶಕರನ್ನು ಸನ್ಮಾನಿಸಲಾಯಿತು. ಚುನಾವಣಾಧಿಕಾರಿಯಾಗಿ ಕೃಷಿ ಅಧಿಕಾರಿ ಮಾರುತಿ ಕಾರ್ಯನಿರ್ವಹಿಸಿದರು. ಮುಖ ಕಾರ್ಯನಿರ್ವಹಣಾಧಿಕಾರಿ ಕುಮಾರಸ್ವಾಮಿ, ಸಹಕಾರಿ ಪ್ರಮುಖರು ಇದ್ದರು.