ಕಕದಲ್ಲಿ ಕೊಪ್ಪಳ ಟಾಪ್​ ಎರಡನೇ ಸ್ಥಾನ

Published on

ಕೊಪ್ಪಳ: ಎಸ್ಸೆಸ್ಸೆಲ್ಸಿ ಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಶೇ.56.57ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಕೊಪ್ಪಳ ಕಕ ಜಿಲ್ಲೆಗಳಲ್ಲಿ ಟಾಪ್​ ಎರಡನೇ ಸ್ಥಾನ ಪಡೆದಿದ್ದು, ರಾಜ್ಯಮಟ್ಟದಲ್ಲಿ 30ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಳೆದ ವರ್ಷಕ್ಕಿಂತ ಎರಡು ಸ್ಥಾನ ಏರಿಕೆ ಕಂಡಿರುವುದೇ ಜಿಲ್ಲೆ ಮಟ್ಟಿಗೆ ಸಾಧನೆ ಎನ್ನಬಹುದು.

10,413 ಬಾಲಕ, 11,483 ಬಾಲಕಿಯರು ಒಟ್ಟು 21,896 ಮಕ್ಕಳು ಪರೀೆ ಬರೆದಿದ್ದಾರೆ. ಇವರಲ್ಲಿ 5,025 ಬಾಲಕ (ಶೇ.48.26), 7,362 ಬಾಲಕಿಯರು (ಶೇ.64.11) ಒಟ್ಟು 12,387 (ಶೇ.56.57) ಮಕ್ಕಳು ತೇರ್ಗಡೆಯಾಗಿದ್ದಾರೆ. ರಾಜ್ಯಮಟ್ಟದಲ್ಲಿ ಕಳೆದ ವರ್ಷ 32ನೇ ಸ್ಥಾನ ಪಡೆದಿದ್ದ ಜಿಲ್ಲೆ ಈ ವರ್ಷ 30ನೇ ಸ್ಥಾನಕ್ಕೆ ಜಿಗಿದಿದೆ. ಒಟ್ಟಾರೆ ಲಿತಾಂಶ ಕುಸಿತ ಕಂಡಿದೆ. ಇನ್ನು ಗ್ರಾಮೀಣ ಭಾಗದವರಿಗಿಂತ ನಗರ ಪ್ರದೇಶದ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ನಗರ ಪ್ರದೇಶದಲ್ಲಿಕ 1,071 ಬಾಲಕ (ಶೇ.48.16), 1,450 ಬಾಲಕಿಯರು (ಶೇ.60.02) ಪಾಸ್​ ಆಗಿದ್ದಾರೆ. ಗ್ರಾಮೀಣ ಭಾಗದಲ್ಲಿ 3.954 ಬಾಲಕ (ಶೇ.48.28), 5,912ಬಾಲಕಿಯರು (ಶೇ.65.20) ಉತ್ತೀರ್ಣರಾಗಿದ್ದಾರೆ. ಬಾಲಕರಿಗಿಂತ ಬಾಲಕಿಯರೇ ಹೆಚ್ಚು ಲಿತಾಂಶ ಪಡೆದಿದ್ದು ಮೇಲುಗೈ ಸಾಧಿಸಿದ್ದಾರೆ.

ಸರ್ಕಾರಿ ಶಾಲೆ ಮಕ್ಕಳು ಅನುದಾನಿತ ಶಾಲೆ ಮಕ್ಕಳನ್ನು ಹಿಂದಿಕ್ಕಿದ್ದಾರೆ. ಖಾಸಗಿ ಶಾಳೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸ್​ ಆಗಿರುವುದು ವಿಶೇಷ. 8,787 ಸರ್ಕಾರಿ ಶಾಲೆ ಮಕ್ಕಳು (ಶೇ.55.66), 1,258 ಅನುದಾನಿತ (ಶೇ.47.47) ಮತ್ತು 2,340 ಖಾಸಗಿ (ಶೇ.67.71) ಮಕ್ಕಳು ತೇರ್ಗಡೆ ಹೊಂದಿದ್ದಾರೆ. ತಾಲೂಕುವಾರು ಲಿತಾಂಶ ಗಮನಿಸಿದಲ್ಲಿ ಯಲಬುರ್ಗಾ&ಪ್ರಥಮ (ಶೇ.60.87), ಗಂಗಾವತಿ&ದ್ವೀತಿಯ (ಶೇ.57.85), ಕುಷ್ಟಗಿ&ತೃತೀಯ (ಶೇ.56.33) ಹಾಗೂ ಜಿಲ್ಲಾ ಕೇಂದ್ರ ಕೊಪ್ಪಳ (ಶೇ.52) ಕೊನೇ ಸ್ಥಾನ ಪಡೆಯುವಂತಾಗಿದೆ. ವಿಷಯವಾರು ನೋಡಿದಲ್ಲಿ ಪ್ರಥಮ ಭಾಷೆಯಲ್ಲಿ (ಶೇ.74.41), ದ್ವೀತಿಯ ಭಾಷೆ (ಶೇ.70.68), ತೃತೀಯ ಭಾಷೆ (ಶೇ.56.57), ಗಣಿತ (ಶೇ.65.59), ವಿಜ್ಞಾನ (ಶೇ.64.24) ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ (ಶೇ.73.19) ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ.

ಕೀರ್ತಿ ರಾಯ್ಕರ್​ ಟಾಪರ್​: ಗಂಗಾವತಿಯ ಎಚ್​.ಆರ್​.ಸರೋಜಮ್ಮ ಬಾಲಕಿಯರ ಕಾಮರ್ಸ್​ ಜೂನಿಯರ್​ ಕಾಲೇಜು ಪ್ರೌಢಶಾಲೆ ವಿಭಾಗದ ಕೀರ್ತಿ ರಾಯ್ಕರ್​ 622 ಅಂಕ (ಶೇ.99.52) ಪಡೆದು ಜಿಲ್ಲಾ ಟಾಪರ್​ ಎನಿಸಿಕೊಂಡಿದ್ದಾಳೆ. ತಾವರಗೇರಾದ ಆದರ್ಶ ವಿದ್ಯಾಲಯದ ಪ್ರತಿಾ ಗುಡಿಕೋಟೆ 621 ಅಂಕ (ಶೇ.99.36) ಪಡೆದು ದ್ವೀತಿಯ ಹಾಗೂ ಭಾಗ್ಯನಗರದ ನ್ಯಾಷನಲ್​ ಹೈಸ್ಕೂಲ್​ನ ಆರ್ಯನ್​ ಎ.ಕೆ. ಹಾಗೂ ಕುದುರಿಮೋತಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಾನಿಯಾ ನದ್​ಾ ತಲಾ 620 ಅಂಕ (ಶೇ.99.2) ಪಡೆದು ತೃತೀಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕುಷ್ಟಗಿಯ ಕ್ರಿಸ್ತ್​ ದಿ ಕಿಂಗ್​ ಆಂಗ್ಲ ಮಾಧ್ಯಮ ಶಾಲೆಯ ಮಿಸ್ಬಾ ಮಹರೀನ್​, ಕೊಪ್ಪಳ ತಾಲೂಕಿನ ಕಾಸನಕಂಡಿ ಹಿಂದುಳಿದ ವರ್ಗಗಳ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿಜಯಲಕ್ಷಿ$್ಮ ಹರಪನಹಳ್ಳಿ, ಗಂಗಾವತಿ ತಾಲೂಕಿನ ಮಲಕನಪರಡಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಚೈತನ್ಯ, ಕುಷ್ಟಗಿ ತಾಲೂಕಿನ ಮೆಣೆಧಾಳದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರತಿಭಾ ಸಿರವಾರ ತಲಾ 619 ಅಂಕ (ಶೇ.99.04) ಪಡೆದು ನಾಲ್ಕನೇ ಸ್ಥಾನ ಪಡೆದಿದ್ದಾರೆ.

ವಸತಿ ಶಾಲೆ ಮಕ್ಕಳ ಸಾಧನೆ : ಜಿಲ್ಲೆಯಲ್ಲಿ ಈ ಬಾರಿ ಟಾಪ 21ರಲ್ಲಿ ಅತಿಹೆಚ್ಚು ವಸತಿ ಶಾಲೆ ಮಕ್ಕಳಿರುವುದು ಗಮನಾರ್ಹ ಸಾಧನೆ. ಕಿತ್ತೂರು ರಾಣಿ ಚನ್ನಮ್ಮ, ಎಸ್ಸಿ, ಎಸ್ಟಿ ಮುರಾರ್ಜಿ ದೇಸಾಯಿ ವಸತಿ ಶಾಲೆ, ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಮಕ್ಕಳು, ಅದರಲ್ಲೂ ಬಾಲಕಿಯರು ಹೆಚ್ಚಿನ ಅಂಕ ಗಳಿಕೆ ಮಾಡಿದ್ದಾರೆ. ಈ ಮೂಲಕ ಖಾಸಗಿ ಶಾಲೆಗಳ ಮಕ್ಕಳಿಗೆ ತೀವ್ರ ಪೈಪೋಟಿ ಒಡ್ಡಿದ್ದಾರೆ. ಟಾಪ್​ 21ರಲ್ಲಿ 1 ಒಬ್ಬ ಅನುದಾನಿತ, ಐವರು ಖಾಸಗಿ, ಒಬ್ಬ ಸರ್ಕಾರಿ ಶಾಲೆ ಮಗು ಇದ್ದರೆ, ಬಾಕಿ 14 ಮಕ್ಕಳು ವಿವಿಧ ವಸತಿ ಶಾಲೆ ಚಿಣ್ಣರೆಂಬುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net