ವಿದ್ವಾನ್ ಬಾಂಬೆ ವಿ.ಆನಂದ್, ವಿದ್ವಾನ್ ವೇದಜ್ಞ ನರಸಿಂಹರಿಂದ ದ್ವಂದ್ವ ವಯೊಲಿನ್ ಕಾರ್ಯಕ್ರಮ

Music _1
Published on

ಮೈಸೂರು: ವಿದ್ವಾನ್ ಬಾಂಬೆ ವಿ.ಆನಂದ್ ಮತ್ತು ವಿದ್ವಾನ್ ವೇದಜ್ಞ ನರಸಿಂಹ ಅವರು ಜೂ.21ರಂದು ಸಾಂಸ್ಕೃತಿಕ ನಗರಿಯಲ್ಲಿ ಸಂಗೀತದ ಕಂಪು ಚೆಲ್ಲಲಿದ್ದಾರೆ.

ಸಂಜೆ 6 ಗಂಟೆಗೆ ಬೆಳದಿಂಗಳ ಸಂಗೀತ-268ರ ಅಂಗವಾಗಿ ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಗೀತ ಸುಧೆ ಹರಿಸಲಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ದ್ವಂದ್ವ ವಯೊಲಿನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಇವರಿಗೆ ವಿದ್ವಾನ್ ಆನೂರು ವಿನೋದ್ ಶ್ಯಾಮ್(ಮೃದಂಗ), ವಿದ್ವಾನ್ ಸುನಾದ್ ಆನೂರ್(ಖಂಜರಿ) ಸಾಥ್ ನೀಡಲಿದ್ದಾರೆ.
ಬಾಂಬೆ ವಿ. ಆನಂದ್ ಅವರು ಪ್ರಾರಂಭಿಕ ಶಿಕ್ಷಣವನ್ನು ಬೋರಿವಿಲಿ ಕಣ್ಣನ್ ಅವರ ಬಳಿ ಪಡೆದರು. ಆನಂತರ ಮುಂಬೈನ ದ ಫೈನ್ ಆರ್ಟ್ಸ್ ಮ್ಯೂಸಿಕ್ ಸ್ಕೂಲ್‌ನಲ್ಲಿ ವಿದುಷಿ ಗೋಮತಿ ಹಾಗೂ ಟಿ.ಆರ್. ಬಾಲಾಮಣಿ ಬಳಿ ಶಿಷ್ಯವೃತ್ತಿ ಮಾಡಿದರು. ಪ್ರಸ್ತುತ ಪದ್ಮಶ್ರೀ ಪುರಸ ್ಕೃತರಾದ ಸಂಗೀತಕಲಾನಿಧಿ ವಿದುಷಿ ಎ.ಕನ್ಯಾಕುಮಾರಿ ಬಳಿ ವಾದನ ನೈಪುಣ್ಯದ ಸೂಕ್ಷ್ಮತೆಗಳನ್ನು ಅಭ್ಯಸಿಸುತ್ತಿದ್ದಾರೆ.

ವೇದಜ್ಞ ನರಸಿಂಹ ಅವರು ಸಂಗೀತದ ಪ್ರಾಥಮಿಕ ಶಿಕ್ಷಣವನ್ನು ವಿದುಷಿ ವೈಷ್ಣವಿ ಆನಂದ್ ಬಳಿ ಪಡೆದು, ಆನಂತರ ಪದ್ಮಶ್ರೀ ಪುರಸ್ಕೃತೆ ಸಂಗೀತಕಲಾನಿಧಿ ವಿದುಷಿ ಎ. ಕನ್ಯಾಕುಮಾರಿ ಅವರ ಬಳಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಸಿಂಗಪೂರದ ಪ್ರತಿಷ್ಠಿತ ಸ್ಕೂಲ್ ಆಫ್ ಆರ್ಟ್ಸ್ ಸಂಸ್ಥೆಯಲ್ಲಿ ವಾದನ ತರಬೇತಿಯನ್ನು ಮುಂದುವರಿಸಿರುವರು. ವಯೊಲಿನ್ ವಾದನದಲ್ಲಿ ಎಬಿಆರ್‌ಎಸ್‌ಎಂ ನಾಲ್ಕನೇ ದರ್ಜೆ ಪರೀಕ್ಷೆ ಪಾಸು ಮಾಡಿರುವರು. ಸಿಂಗಪೂರ್ ನ್ಯಾಷನಲ್ ಆರ್ಟ್ಸ್ ಕೌನ್ಸಿಲ್ 2017ರಲ್ಲಿ ನಡೆಸಿದ ವಯೊಲಿನ್ (ಜ್ಯೂನಿಯರ್) ವಾದನದಲ್ಲಿ ಬಹುಮಾನ ಗಳಿಸಿದ್ದಾರೆ. 11ನೇ ವಯಸ್ಸಿನಿಂದಲೇ ಪಕ ್ಕವಾದ್ಯ ಸಹಕಾರದ ಕಾರ್ಯಕ್ರಮಗಳನ್ನು ನೀಡತೊಡಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net