ಬಾಕಿ ವೇತನ ಬಿಡುಗಡೆಗೊಳಿಸಲು ವಿಮ್ಸ್ ಗುತ್ತಿಗೆ ನೌಕರರ ಆಗ್ರಹ

240220 Ballari Vims Employes Protest
Published on

ಬಳ್ಳಾರಿ: ಬಾಕಿಯಿರುವ ವೇತನವನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ವಿಮ್ಸ್ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ನಗರದ ವಿಮ್ಸ್ ಆವರಣದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಮೂರು ತಿಂಗಳಿಂದ ವೇತನವನ್ನೇ ನೀಡಿಲ್ಲ. ಸರಿಯಾದ ಸಮಯಕ್ಕೆ ವೇತನ ಬಾರದೇ ಇರುವುದರಿಂದ ಜೀವನ ಸಾಗಿಸುವುದು ದುಸ್ತರವಾಗಿದೆ. ನಿತ್ಯದ ಖರ್ಚಿಗೆ ಅವರಿವರ ಬಳಿ ಸಾಲ ಮಾಡುವುದಾಗಿದೆ. ಇಂದಿನ ದುಬಾರಿ ಕಾಲದಲ್ಲಿ ಸಮಯಕ್ಕೆ ಸರಿಯಾಗಿ ಸಂಬಳ ಬರದಿದ್ದರೆ ನೌಕರರ ಪಾಡು ದೇವರೇ ಬಲ್ಲ ಎಂದು ತಿಳಿದಿದ್ದರೂ ವಿಮ್ಸ್ ಆಡಳಿತ ಮಂಡಳಿ ಸಕಾಲಕ್ಕೆ ವೇತನ ಪಾವತಿಸದಿರುವುದು ದುರಂತದ ಸಂಗತಿ. ಇನ್ನಾದರೂ ಪ್ರತಿ ತಿಂಗಳ 10ನೇ ತಾರೀಖಿನೊಳಗೆ ವೇತನ ನೀಡುವುದಕ್ಕೆ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಂದು ಪ್ರತಿಭಟನಾ ನಿರತ ನೌಕರರು ಎಚ್ಚರಿಸಿದರು. ಸಂಘದ ಅಧ್ಯಕ್ಷ ಆರ್.ಸೋಮಶೇಖರ್‌ಗೌಡ, ಕಾರ್ಯದರ್ಶಿ ಎ.ದೇವದಾಸ್, ಕಾರ್ಯಕರ್ತರಾದ ರಾಮಣ್ಣ, ಶಂಕ್ರಪ್ಪ, ಸುರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net